×
Ad

ಜೂನ್‌ವರೆಗೂ ಡೆಮು ರೈಲು ಸೇವೆ ವಿಸ್ತರಣೆ

Update: 2019-05-12 23:38 IST

ಬೆಂಗಳೂರು, ಮೇ 12: ಚಿಕ್ಕಬಳ್ಳಾಪುರದ ವರೆಗೂ ವಿಸ್ತರಣೆ ಮಾಡಿದ್ದ ಯಶವಂತಪುರ- ದೇವನಹಳ್ಳಿ ಡೆಮು ವಿಶೇಷ ರೈಲನ್ನು ಜೂನ್‌ವರೆಗೂ ಮುಂದುವರಿಸಲು ನೈಋತ್ಯ ರೈಲ್ವೆ ತೀರ್ಮಾನಿಸಿದೆ.

ರೈಲು ಸಂಖ್ಯೆ 06595 ಹಾಗೂ 06596 ಎರಡು ರೈಲುಗಳನ್ನು ಬೆಳಗ್ಗೆ ಹಾಗೂ ಸಂಜೆ ಕಾರ್ಯಾಚರಿಸಲಾಗುತ್ತಿದೆ. ಬೆಳಗ್ಗೆ 10.35ಕ್ಕೆ ಯಶವಂತಪುರದಿಂದ ಕಾರ್ಯಾಚರಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕರ ಕೊರತೆ ಕಂಡುಬಂದಿತ್ತು. ಸಮಯದಲ್ಲಿ ಬದಲಾವಣೆ ಮಾಡಲು ರೈಲು ಪ್ರಯಾಣಿಕರು ಒತ್ತಾಯ ಮಾಡಿದ್ದರೂ ಅದಕ್ಕೆ ಇಲಾಖೆ ಅಧಿಕಾರಿಗಳು ಸ್ಪಂದಿಸಿಲ್ಲ.

ಚಿಕ್ಕಬಳ್ಳಾಪುರವರೆಗೆ ಸೇವೆ ವಿಸ್ತರಿಸಿದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಲಿದೆ ಎಂದು ತಿಳಿದುಬಂದಿತ್ತು. ಅದರಂತೆ ಚಿಕ್ಕಬಳ್ಳಾಪುರದ ನಡುವೆ ಸೇವೆಯನು ವಿಸ್ತರಣೆ ಮಾಡಿ ಕಾರ್ಯಾಚರಿಸುತ್ತಿವೆ. ಇದಕ್ಕೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆತಿರುವುದರಿಂದ ಜೂನ್‌ವರೆಗೆ ಮುಂದುವರಿಸಲು ತೀರ್ಮಾನಿಸಲಾಗಿದೆ. ಮೇ 18ರಿಂದ ಆರಂಭವಾಗಿ ಜೂ.17ರ ವರೆಗೆ ಈ ರೈಲುಗಳು ಚಿಕ್ಕಬಳ್ಳಾಪುರ ಹಾಗೂ ಯಶವಂತಪುರ ನಡುವೆ ಕಾರ್ಯಾಚರಣೆ ನಡೆಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News