ರಬಾಡ ವಿಶ್ವಕಪ್ ವೇಳೆಗೆ ಫಿಟ್

Update: 2019-05-12 19:10 GMT

ಜೋಹಾನ್ಸ್‌ಬರ್ಗ್, ಮೇ 12: ದಕ್ಷಿಣ ಆಫ್ರಿಕದ ವೇಗದ ಬೌಲರ್ ಕಾಗಿಸೊ ರಬಾಡ ಅವರು ಭಾರತದ ವಿರುದ್ಧ ಜೂ.5ರಂದು ನಡೆಯಲಿರುವ ವಿಶ್ವಕಪ್‌ನಲ್ಲಿ ತನ್ನ ತಂಡದ ಮೊದಲ ಪಂದ್ಯಕ್ಕೆ ಲಭ್ಯರಾಗುವುದನ್ನು ನಿರೀಕ್ಷಿಸಲಾಗಿದೆ. ರಬಾಡ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರು. ಡೆಲ್ಲಿ ತಂಡದ ಸ್ಟಾರ್ ಬೌಲರ್ ರಬಾಡ 25 ವಿಕೆಟ್ ಪಡೆದಿದ್ದಾರೆ. ಡೆಲ್ಲಿ ತಂಡ ಕ್ವಾಲಿಫೈಯರ್ ಎರಡನೇ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೋಲು ಅನುಭವಿಸಿ ಫೈನಲ್‌ಗೇರುವ ಅವಕಾಶ ವಂಚಿತಗೊಂಡಿತ್ತು. ರಬಾಡರಿಗೆ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲೇ ತಂಡದಿಂದ ದೂರವಾಗಿದ್ದರು. ರಬಾಡ ಮೂರು ವಾರಗಳಲ್ಲಿ ಚೇತರಿಸಿಕೊಳ್ಳಲಿದ್ದಾರೆ ಎಂದು ದಕ್ಷಿಣ ಆಫ್ರಿಕ ತಂಡದ ವೈದ್ಯರಾದ ಮುಹಮ್ಮದ್ ಮೂಸಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News