ಬೆಂಗಳೂರು ವಿವಿ ಪ್ರತಿಮೆ ವಿವಾದ: ರಾಜ್ಯಪಾಲರಿಗೆ ವರದಿ ಸಲ್ಲಿಕೆ

Update: 2019-05-13 16:18 GMT

ಬೆಂಗಳೂರು, ಮೇ 13 : ಬೆಂಗಳೂರು ವಿಶ್ವವಿದ್ಯಾಲಯ ಪ್ರತಿಮೆ ವಿವಾದ ಈಗ ರಾಜಭವನದ ಮೆಟ್ಟಿಲೇರಿದ್ದು, ವಿವಿಯ ಜ್ಞಾನಭಾರತಿ ಆವರಣದಲ್ಲಿ ಸರಸ್ವತಿ ಮತ್ತು ಬುದ್ಧನ ಪ್ರತಿಮೆ ಸ್ಥಾಪನೆ ವಿವಾದದ ವರದಿಯನ್ನು ವಿವಿ ಕುಲಪತಿ ಪ್ರೊ. ಕೆ.ಆರ್.ವೇಣುಗೊಪಾಲ್ ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ.

ವರದಿಯಲ್ಲಿ ಸಿಂಡಿಕೇಟ್ ಸಭೆಯಲ್ಲಿ ಪ್ರತಿಮೆ ವಿವಾದ ಸಂಬಂಧ ಕೈಗೊಂಡಿರುವ ನಿರ್ಣಯ ಕುರಿತು ಪ್ರಸ್ತಾಪಿಸಲಾಗಿದೆ. ಜತೆಗೆ ಬುದ್ಧನ ಪ್ರತಿಮೆ ನಿರ್ಮಾಣದ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘಟನೆಗಳು ನಡೆಸಿದ ಗಲಾಟೆಯ ಫೋಟೊಗಳನ್ನು ಕಳುಹಿಸಿದ್ದಾರೆ. ಇದೇ ವರದಿಯನ್ನು ರಾಜಭವನದ ಜತೆಗೆ ಪೊಲೀಸ್ ಆಯುಕ್ತರ ಕಚೇರಿ, ಉನ್ನತ ಶಿಕ್ಷಣ ಇಲಾಖೆಗೂ ಸಲ್ಲಿಸಿದ್ದಾರೆ.

ಪ್ರತಿಮೆ ವಿವಾದ ಸಂಬಂಧ ವಿವರವಾದ ವರದಿಯನ್ನು ರೂಪಿಸಿ ಸರಕಾರಕ್ಕೆ ಕಳುಹಿಸಲಾಗಿದೆ. ಸರಕಾರ ಕೈಗೊಳ್ಳುವ ನಿರ್ಣಯಕ್ಕಾಗಿ ಕಾಯುತ್ತೇವೆ.

-ಕೆ.ಆರ್.ವೇಣುಗೋಪಾಲ್, ಬೆಂವಿವಿ ಕುಲಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News