ಅಗ್ರಸ್ಥಾನ ಭದ್ರಪಡಿಸಿಕೊಂಡ ಜೊಕೊವಿಕ್

Update: 2019-05-13 18:59 GMT

ಪ್ಯಾರಿಸ್, ಮೇ 13: ಮ್ಯಾಡ್ರಿಡ್ ಓಪನ್‌ನಲ್ಲಿ ರವಿವಾರ ಪ್ರಶಸ್ತಿ ಜಯಿಸಿದ ನೊವಾಕ್ ಜೊಕೊವಿಕ್ ಸೋಮವಾರ ಬಿಡುಗಡೆಯಾದ ಎಟಿಪಿ ಟೆನಿಸ್ ರ್ಯಾಂಕಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಗ್ರೀಸ್‌ನ ಯುವ ಆಟಗಾರ ಸ್ಟೆಫನೊಸ್‌ರನ್ನು ಮಣಿಸಿ ಮ್ಯಾಡ್ರಿಡ್ ಟೂರ್ನಮೆಂಟ್‌ನ್ನು ಜಯಿಸಿದ್ದ ಸರ್ಬಿಯದ ವಿಶ್ವದ ನಂ.1 ಆಟಗಾರ ಜೊಕೊವಿಕ್ ಪ್ರತಿಸ್ಪರ್ಧಿ ಸ್ಪೇನ್‌ನ ರಫೆಲ್ ನಡಾಲ್ ಎದುರು ಭಾರೀ ಮುನ್ನಡೆ ಸಾಧಿಸಿದರು. ಸಿಟ್‌ಸಿಪಾಸ್ ಫೈನಲ್‌ನಲ್ಲಿ ಜೊಕೊವಿಕ್‌ಗೆ ಶರಣಾಗಿದ್ದರೂ ರ್ಯಾಂಕಿಂಗ್‌ನಲ್ಲಿ 2 ಸ್ಥಾನ ಭಡ್ತಿ ಪಡೆದು ಏಳನೇ ಸ್ಥಾನಕ್ಕೇರಿದ್ದಾರೆ. ಬಾರ್ಸಿಲೋನ ಓಪನ್ ಚಾಂಪಿಯನ್ ಡೊಮಿನಿಕ್ ಥೀಮ್ ಮ್ಯಾಡ್ರಿಡ್ ಓಪನ್‌ನ ಸೆಮಿ ಫೈನಲ್‌ನಲ್ಲಿ ನಿರ್ಗಮಿಸಿದ್ದರೂ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಮ್ಯಾಡ್ರಿಡ್ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಥೀಮ್‌ಗೆ ಸೋತಿದ್ದ ರೋಜರ್ ಫೆಡರರ್ 3ನೇ ರ್ಯಾಂಕಿನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News