ಪುರುಷರ ಎಎಫ್‌ಸಿ ಕಪ್‌ನಲ್ಲಿಮೂವರು ಮಹಿಳಾ ರೆಫರಿಗಳು

Update: 2019-05-15 02:20 GMT

ಕೌಲಾಲಂಪುರ, ಮೇ 14: ಪುರುಷರ ಕಾಂಟಿನೆಂಟಲ್ ಕ್ಲಬ್ ಕಪ್ ಹಣಾಹಣಿಯಲ್ಲಿ ಇದೇ ಮೊದಲ ಬಾರಿ ಮಹಿಳೆಯರನ್ನು ಒಳಗೊಂಡ ರೆಫರಿ ತಂಡ ಕಾರ್ಯನಿರ್ವಹಿಸಲಿದೆ ಎಂದು ಏಶ್ಯನ್ ಫುಟ್ಬಾಲ್ ಕಾನ್ಫಡರೇಶನ್(ಎಎಫ್‌ಸಿ)ಮಂಗಳವಾರ ಘೋಷಿಸಿದೆ. ಇದೊಂದು ಐತಿಹಾಸಿಕ ಹೆಜ್ಜೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬುಧವಾರ ಮ್ಯಾನ್ಮಾರ್ ಯಾಂಗಾನ್ ಯುನೈಟೆಡ್ ಹಾಗೂ ಕಾಂಬೋಡಿಯದ ನಾಗಾ ವರ್ಲ್ಡ್ ಮಧ್ಯೆ ನಡೆಯಲಿರುವ ಎಎಫ್‌ಸಿ ಕಪ್ ಪಂದ್ಯದಲ್ಲಿ ಜಪಾನ್‌ನ ರೆಫರಿ ಯೊಶಿಮಿ ಯಮಶಿಟಾ, ಸಹಾಯಕರಾಗಿ ಮಕೊಟೊ ಬೊರೊನೊ ಹಾಗೂ ನವೊಮಿ ಟೆಶಿರೊಗಿ ಕಾರ್ಯನಿರ್ವಹಿಸಲಿದ್ದಾರೆ.

‘‘ಏಶ್ಯನ್ ಫುಟ್ಬಾಲ್ ಕಾನ್ಫಡರೇಶನ್‌ನ(ಎಎಫ್‌ಸಿ)ಕ್ಲಬ್ ಸ್ಪರ್ಧೆಗಳಲ್ಲಿ ಇದೇ ಮೊದಲ ಬಾರಿ ಮೂವರು ಮಹಿಳಾ ರೆಫರಿಗಳನ್ನು ನಿಯೋಜಿಸಲಾಗಿದೆ. ಇದು ಏಶ್ಯಾ ರೆಫರಿಂಗ್‌ನಲ್ಲಿ ನೂತನ ಮೈಲುಗಲ್ಲು ನಿರ್ಮಿಸಿದೆ’’ ಎಂದು ಎಎಫ್‌ಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ. 2014ರಲ್ಲಿ ಮೊದಲ ಬಾರಿ ಎಎಫ್‌ಸಿ ಕಪ್ ಪಂದ್ಯಗಳಲ್ಲಿ ಆಸ್ಟ್ರೇಲಿಯದ ಸಾರ್ಹಾ ಹೊ ಹಾಗೂ ಅಲಿಸನ್ ಫ್ಲೈನ್ ಸಹಾಯಕ ರೆಫರಿಗಳಾಗಿ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News