ಭಾರತದ ವಿಶ್ವಕಪ್ ತಂಡಕ್ಕೆ ಓರ್ವ ಉತ್ತಮ ವೇಗಿಯ ಕೊರತೆಯಿದೆ: ಗಂಭೀರ್

Update: 2019-05-16 04:36 GMT

ಮುಂಬೈ, ಮೇ 15: ಭಾರತದ ಕ್ರಿಕೆಟ್ ವಿಶ್ವಕಪ್ ತಂಡದಲ್ಲಿ ಓರ್ವ ಉತ್ತಮ ವೇಗದ ಬೌಲರ್ ಕೊರತೆ ಎದ್ದುಕಾಣುತ್ತಿದೆ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

‘‘ನನ್ನ ಪ್ರಕಾರ ಭಾರತ ತಂಡ ಇನ್ನೋರ್ವ ಉತ್ತಮ ವೇಗದ ಬೌಲರ್ ಕೊರತೆ ಎದುರಿಸುತ್ತಿದೆ. ಜಸ್‌ಪ್ರೀತ್ ಬುಮ್ರಾ, ಮುಹಮ್ಮದ್ ಶಮಿ ಹಾಗೂ ಭುವಿ(ಭುವನೇಶ್ವರ ಕುಮಾರ್)ಗೆ ಮತ್ತಷ್ಟು ಬೆಂಬಲದ ಅಗತ್ಯವಿದೆ. ಭಾರತ ಇಬ್ಬರು ಆಲ್‌ರೌಂಡರ್‌ಗಳಾದ ಹಾರ್ದಿಕ್(ಪಾಂಡ್ಯ)ಹಾಗೂ ವಿಜಯ ಶಂಕರ್‌ರನ್ನು ಒಳಗೊಂಡಿದೆ ಎಂದು ಹೇಳಬಹುದು. ಆದರೆ, ನಾನು ಅದನ್ನು ಒಪ್ಪುವುದಿಲ್ಲ. ಅಂತಿಮವಾಗಿ ತಂಡದ ಸಂಯೋಜನೆ ಸರಿಯಾಗಿರಬೇಕಾಗುತ್ತದೆ’’ ಎಂದು ಗಂಭೀರ್ ಹೇಳಿದ್ದಾರೆ.

  ‘‘ಎಲ್ಲ ತಂಡಗಳು ಪರಸ್ಪರ ಸ್ಪರ್ಧಿಸುತ್ತಿರುವ ಕಾರಣ ಇದೊಂದು ಉತ್ತಮ ಸ್ಪರ್ಧೆಯಿರುವ ಟೂರ್ನಿಯಾಗಲಿದೆ. ಇಂತಹ ಮಾದರಿಯ ಮೂಲಕ ನಿಜವಾಗಿ ವಿಶ್ವ ಚಾಂಪಿಯನ್ ತಂಡ ಮೂಡಿಬರಲಿದೆ. ಮುಂದಿನ ಎಲ್ಲ ವಿಶ್ವಕಪ್‌ನಲ್ಲೂ ಐಸಿಸಿ ಇದೇ ಮಾದರಿಯ ಕ್ರಿಕೆಟ್‌ಗೆ ಬದ್ಧವಾಗಿರಬೇಕು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News