ಪುರುಷರ ಟ್ರ್ಯಾಪ್ ಅರ್ಹತಾ ಸುತ್ತಿನಲ್ಲಿ ಕಿನನ್, ಪೃಥ್ವಿರಾಜ್ ಮೇಲುಗೆ

Update: 2019-05-16 05:21 GMT

ಚಾಂಗ್ವಾನ್(ಕೊರಿಯಾ), ಮೇ 15: ಐಎಸ್‌ಎಸ್‌ಎಫ್ ಶಾಟ್‌ಗನ್ ವಿಶ್ವಕಪ್‌ನ ಪುರುಷರ ಟ್ರಾಪ್ ಶೂಟಿಂಗ್ ಸ್ಪರ್ಧೆಯ ಎರಡು ಸುತ್ತಿನಲ್ಲಿ ಭಾರತದ ಕಿನನ್ ಚಿನಾಯ್ ಹಾಗೂ ಪೃಥ್ವಿರಾಜ್ ಟೊಂಡೈಮನ್ ಮೇಲುಗೈ ಸಾಧಿಸಿದ್ದಾರೆ.

ಬುಧವಾರ ಎರಡು ರೌಂಡ್‌ಗಳಲ್ಲಿ ತಲಾ 25 ಅಂಕ ಗಳಿಸಿರುವ ಕಿನನ್, ಪೃಥ್ವಿರಾಜ್ 109 ಶೂಟರ್‌ಗಳಿದ್ದ ಅರ್ಹತಾ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಅಗ್ರ-6 ಶೂಟರ್‌ಗಳು ಪದಕದ ಸುತ್ತು ತಲುಪುವ ಮೊದಲು ಗುರುವಾರ ಇನ್ನೂ ಮೂರು ಸುತ್ತುಗಳ ಪಂದ್ಯ ನಡೆಯಲಿದೆ. ಭಾರತೀಯ ಶೂಟರ್‌ಗಳು ಅಂತಿಮ ಸ್ಥಾನ ತಲುಪುವ ಅದಮ್ಯ ವಿಶ್ವಾಸದಲ್ಲಿದ್ದಾರೆ. ಕಿನನ್ ಹಾಗೂ ಪೃಥ್ವಿರಾಜ್ ಗ್ರೇಟ್ ಬ್ರಿಟನ್ ಹಾಗೂ ಕಝಕ್‌ಸ್ತಾನದ ಶೂಟರ್‌ಗಳೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ಸ್ಪರ್ಧೆಯಲ್ಲಿದ್ದ ಭಾರತದ ಮೂರನೇ ಶೂಟರ್ ರೊರಾವರ್ ಸಿಂಗ್ ಸಂಧು 50ರಲ್ಲಿ 45 ಅಂಕ ಗಳಿಸಿ 82ನೇ ಸ್ಥಾನ ಪಡೆದಿದ್ದಾರೆ.

ಬುಧವಾರ ಕೊನೆಗೊಂಡ ಮಹಿಳಾ ಟ್ರಾಪ್‌ನಲ್ಲಿ ಶಗುನ್ ಚೌಧರಿ ಒಟ್ಟು 115 ಅಂಕ ಗಳಿಸುವುದರೊಂದಿಗೆ 35ನೇ ಸ್ಥಾನ ಪಡೆದರು. ರಾಜೇಶ್ವರಿ ಕುಮಾರಿ 99 ಅಂಕ ಗಳಿಸಿ 56ನೇ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News