ನೆಹರು, ಇಂದಿರಾ ಬಗ್ಗೆ ಅವಹೇಳನಕಾರಿ ಹೇಳಿಕೆ: ಮಾಜಿ ಸಂಸದ ವಿಜಯಸಂಕೇಶ್ವರ್ ವಿರುದ್ಧ ಸೈಬರ್ ಕ್ರೈಮ್‌ಗೆ ದೂರು

Update: 2019-05-16 14:12 GMT

ಬೆಂಗಳೂರು, ಮೇ 16: ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ಪ್ರಕಟಿಸಿರುವ ಮಾಜಿ ಸಂಸದ ವಿಜಯ ಸಂಕೇಶ್ವರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ವತಿಯಿಂದ ಸೈಬರ್ ಕ್ರೈಮ್‌ಗೆ ದೂರು ಸಲ್ಲಿಸಲಾಗಿದೆ. 

ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಬಾಬರ್ ವಂಶಸ್ಥರು. ಅವರ ಅಜ್ಜನ ಹೆಸರು ಘಿಸಿಯಾವುದ್ದೀನ್ ಘಾಜಿ. ಇವರು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದವರು. ಬಾಬರ್ ಎಂದರೆ ಕೊಳ್ಳೆ ಹೊಡೆಯುವ ಜನ ಎಂದೇ ಪ್ರತೀತಿ. ಅದಕ್ಕಾಗಿಯೆ ಬ್ರಿಟಿಷರು ಬಾಬರ್ ವಂಶಸ್ಥರನ್ನು ಸಿಕ್ಕಲ್ಲಿ ಕೊಲ್ಲುತ್ತಿದ್ದರು. ಅಂತಹ ವಂಶಸ್ಥರಿಂದ ಭಾರತದ ಹಿತ ಹೇಗೆ ಸಾಧ್ಯವೆಂದು ಎಂದು ವಿಜಯ್ ಸಂಕೇಶ್ವರ್ ಭಾವಚಿತ್ರವಿರುವ ವಾಟ್ಸ್ ಆ್ಯಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ. ಹೀಗಾಗಿ ಇದರ ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಒತ್ತಾಯಿಸಿದ್ದಾರೆ.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಕೊಳ್ಳೆ ಹೊಡೆಯುವವರು ಎಂಬಂತೆ ಬಿಂಬಿತವಾದ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕ ಮಾಡಿದ್ದಾರೆ. ಇದನ್ನು ಗಂಭೀರ ಪ್ರಕರಣವೆಂದು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News