ಜಾತಿ ನಿಂದನೆ ಆರೋಪ: ಮಾಜಿ ಸಭಾಪತಿ ಹೊರಟ್ಟಿ ವಿರುದ್ಧ ಚು.ಆಯೋಗಕ್ಕೆ ದೂರು

Update: 2019-05-16 16:34 GMT

ಬೆಂಗಳೂರು, ಮೇ 16: ವಿಶ್ವಕರ್ಮ ಸಮುದಾಯ ಕುರಿತು ನಿಂದನೆ ಮಾಡಿದ್ದಾರೆಂದು ಆರೋಪಿಸಿ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ರಾಜ್ಯ ಚುನಾವಣಾ ಆಯೋಗಗಕ್ಕೆ ಅಖಿಲ ಕರ್ನಾಟಕ ವಿಶ್ವಕರ್ಮ ಹೋರಾಟಗಾರರ ಸಮಿತಿ ದೂರು ನೀಡಿದೆ.

ಗುರುವಾರ ಇಲ್ಲಿನ ಶೇಷಾದ್ರಿ ರಸ್ತೆಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ದೂರು ಸಲ್ಲಿಸಿದ್ದು, ಬಸವರಾಜ ಹೊರಟ್ಟಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಮಿತಿ ಒತ್ತಾಯ ಮಾಡಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ರಾಜ್ಯಾಧ್ಯಕ್ಷೆ ಗಾಯತ್ರಿ ಚಂದ್ರಶೇಖರ್, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಕುಂದಗೋಳ ವಿಧಾನ ಸಭಾ ಉಪಚುನಾವಣಾ ಪ್ರಚಾರ ಸಂದರ್ಭದಲ್ಲಿ, ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ವ್ಯಕ್ತಿಯೊಬ್ಬರ ಬಗ್ಗೆ ಉದ್ಯೋಗ ಇಲ್ಲದ ಬಡಗಿ ಎಂದು ಉಲ್ಲೇಖ ಮಾಡಿದ್ದಾರೆ. ಬಡಗಿ ವೃತ್ತಿ ಎನ್ನುವುದು ವಿಶ್ವಕರ್ಮ ಸಮುದಾಯದ ಒಂದು ಅಂಗ. ಆದ್ದರಿಂದ ಬಸವರಾಜ ಹೊರಟ್ಟಿ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕೆಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News