ಕಿಂಗ್ಸ್ ಕಪ್: ಪೂರ್ವತಯಾರಿ ಶಿಬಿರಕ್ಕೆ 37 ಸಂಭಾವ್ಯ ಆಟಗಾರರ ಆಯ್ಕೆ

Update: 2019-05-17 06:10 GMT

ಹೊಸದಿಲ್ಲಿ, ಮೇ 16: ಭಾರತ ಫುಟ್ಬಾಲ್ ತಂಡದ ನೂತನ ಕೋಚ್ ಇಗೊರ್ ಸ್ಟಿಮಾಕ್ ಥಾಯ್ಲೆಂಡ್‌ನಲ್ಲಿ ಜೂ.5ರಿಂದ 8ರ ತನಕ ನಡೆಯಲಿರುವ ಕಿಂಗ್ಸ್‌ಕಪ್ ಟೂರ್ನಿಗೆ ಭಾರತದ ಪೂರ್ವ ತಯಾರಿ ಶಿಬಿರಕ್ಕೆ 37 ಆಟಗಾರರನ್ನು ಒಳಗೊಂಡ ತಂಡವನ್ನು ಘೋಷಿಸಿದ್ದಾರೆ. ಪೂರ್ವತಯಾರಿ ಶಿಬಿರ ಮೇ 20 ರಿಂದ ಹೊಸದಿಲ್ಲಿಯಲ್ಲಿ ನಡೆಯಲಿದೆ. ‘‘ ಯುಎಇನಲ್ಲಿ ನಡೆದ ಎಎಫ್‌ಸಿ ಏಶ್ಯನ್ ಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ತಂಡವನ್ನು ನಾನು ಗೌರವಿಸುತ್ತೇನೆ. ಐ-ಲೀಗ್ ಹಾಗೂ ಐಎಸ್‌ಎಲ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಕೆಲವು ಆಟಗಾರರು ಪ್ರತಿಭಾವಂತರಾಗಿದ್ದು, ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ತಕ್ಷಣವೇ ಹೊಸದಿಲ್ಲಿಗೆ ತೆರಳಿ ಭಾರತ ತಂಡದೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಹೊಸ ಸವಾಲುಗಳೆಂದರೆ ನನಗೆ ತುಂಬಾ ಇಷ್ಟ. ಬ್ಲೂ ಟೈಗರ್ಸ್‌ಗಳಿಗೆ ಕೋಚಿಂಗ್ ನೀಡಲು ಎದುರು ನೋಡುತ್ತಿದ್ದೇನೆ’’ಎಂದು ಸ್ಟಿಮಾಕ್ ಹೇಳಿದ್ದಾರೆ.

ಮೇ ಮೂರನೇ ವಾರ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಸ್ಟ್ರೈಕರ್ ಜೇಜೆ ಲಾಲ್‌ಪೆಕುಲ್ವಾರನ್ನು ಶಿಬಿರಕ್ಕೆ ಪರಿಗಣಿಸಲಾಗಿಲ್ಲ. ಕಿಂಗ್ಸ್‌ಕಪ್ ಕೊನೆಗೊಂಡ ತಕ್ಷಣ ಜುಲೈನಲ್ಲಿ ಇಂಟರ್‌ಕಾಂಟಿನೆಂಟಲ್ ಕಪ್ ಆರಂಭವಾಗಲಿದೆ.

ಗೋಲ್‌ಕೀಪರ್‌ಗಳು: ಗುರುಪ್ರೀತ್ ಸಿಂಗ್ ಸಂಧು, ವಿಶಾಲ್ ಕೈಥ್, ಅಮರಿಂದರ್ ಸಿಂಗ್, ಕಮಲ್‌ಜಿತ್ ಸಿಂಗ್.

ಡಿಫೆಂಡರ್‌ಗಳು: ಪ್ರೀತಂ ಕೊಟಾಲ್, ನಿಶು ಕುಮಾರ್, ರಾಹುಲ್ ಭೆಕೆ, ಸಲಾಮ್ ರಂಜನ್ ಸಿಂಗ್, ಸಂದೇಶ್ ಝಿಂಗಾನ್, ಆದಿಲ್ ಖಾನ್, ಅನ್ವರ್ ಅಲಿ(ಜೂ.), ಸುಭಾಶಿಶ್ ಬೋಸ್, ನಾರಾಯಣ ದಾಸ್.

ಮಿಡ್ ಫೀಲ್ಡರ್‌ಗಳು: ಉದಾಂತ ಸಿಂಗ್, ಜಾಕಿಚಂದ್ ಸಿಂಗ್, ಬ್ರೆಂಡನ್ ಫೆರ್ನಾಂಡಿಸ್, ಅನಿರುದ್ಧ ಥಾಪ, ರಾನಿಯೆರ್ ಫೆರ್ನಾಂಡಿಸ್, ಬಿಕ್ರಂಜೀತ್ ಸಿಂಗ್, ಧನಪಾಲ್ ಗಣೇಶ್, ಪ್ರಣಯ್ ಹಲ್ದರ್, ರೌವ್‌ಲಿನ್ ಬೊರ್ಗೆಸ್, ಜರ್ಮನ್‌ಪ್ರೀತ್ ಸಿಂಗ್, ವಿನೀತ್ ರಾಯ್, ಸಹಾಲ್ ಅಬ್ದುಲ್, ಅಮರ್‌ಜೀತ್ ಸಿಂಗ್, ರೆಡೀಮ್ ಟ್ಲಾಂಗ್, ಲಲಿಯಾನ್‌ಝುಯೆಲಾ ಚಾಂಗ್ಟೆ, ನಂದ ಕುಮಾರ್, ಕೋಮಲ್ ಥಟಾಲ್, ಮೈಕಲ್ ಸೂಸಾಯಿರಾಜ್.

ಫಾರ್ವರ್ಡ್‌ಗಳು: ಬಲ್ವಂತ್ ಸಿಂಗ್, ಸುನೀಲ್ ಚೆಟ್ರಿ, ಜೊಬ್ಬಿ ಜಸ್ಟಿನ್, ಸುಮೀತ್ ಪಾಸ್ಸಿ, ಫಾರೂಕ್ ಚೌಧರಿ, ಮನ್ವೀರ್ ಸಿಂಗ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News