ಟೆನ್ನಿಸ್ ಆಟಗಾರ್ತಿ ವಿಕಾರಿಯೋರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ
Update: 2019-05-17 22:11 IST
ಬೆಂಗಳೂರು, ಮೇ 17: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಖ್ಯಾತ ಅಂತಾರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ಅರಾಂತ್ಸಾ ಸ್ಯಾಂಚೆಸ್ ವಿಕಾರಿಯೋ ಭೇಟಿ ಮಾಡಿದರು.
ಶುಕ್ರವಾರ ನಗರದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಅವರು, ಬೆಂಗಳೂರಿನಲ್ಲಿ ಮೇ 19ರಂದು ನಡೆಯಲಿರುವ ಟಿಸಿಎಸ್ ವರ್ಲ್ಡ್ 10 ಕೆ ಬೆಂಗಳೂರು ಮ್ಯಾರಥಾನ್‌ನ ರಾಯಭಾರಿಯಾಗಿರುವ ವಿಕಾರಿಯೋ ಅವರು ಕಾರ್ಯಕ್ರಮದ ಬಗ್ಗೆ ಸಿಎಂಗೆ ವಿವರ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.