ಐಸಿಸಿ ವಿಶ್ವಕಪ್: 500ಕ್ಕೂ ಅಧಿಕ ಸ್ಕೋರ್ ದಾಖಲಾಗುವ ನಿರೀಕ್ಷೆ?

Update: 2019-05-18 02:51 GMT

ಲಂಡನ್, ಮೇ 17: ಆಸ್ಟ್ರೇಲಿಯ-ನ್ಯೂಝಿಲ್ಯಾಂಡ್‌ನ ಜಂಟಿ ಆತಿಥ್ಯದಲ್ಲಿ 2015ರಲ್ಲಿ ನಡೆದ ವಿಶ್ವಕಪ್‌ನ ಬಳಿಕ ಗರಿಷ್ಠ ಏಕದಿನ ಸ್ಕೋರ್ ದಾಖಲೆ ಎರಡು ಬಾರಿ ಮುರಿಯಲ್ಪಟ್ಟಿದೆ. ಇಂಗ್ಲೆಂಡ್ ತಂಡ ತನ್ನ ತಾಯ್ನೆಡಿನಲ್ಲೇ ಈ ಸಾಧನೆ ಮಾಡಿದ್ದು ವಿಶೇಷ. 2016ರ ಆಗಸ್ಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಟ್ರೆಂಟ್‌ಬ್ರಿಡ್ಜ್‌ನ ನಾಟಿಂಗ್‌ಹ್ಯಾಮ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 444 ರನ್ ಗಳಿಸಿದ್ದ ಇಂಗ್ಲೆಂಡ್, ಕಳೆದ ವರ್ಷದ ಜೂನ್‌ನಲ್ಲಿ ಇದೇ ಮೈದಾನದಲ್ಲಿ ಆಸ್ಟ್ರೇಲಿಯ ವಿರುದ್ಧ 6 ವಿಕೆಟ್ ನಷ್ಟಕ್ಕೆ 481 ರನ್ ಗಳಿಸಿದೆ.ಇದು ಏಕದಿನ ಕ್ರಿಕೆಟ್‌ನ ಗರಿಷ್ಠ ಮೊತ್ತವಾಗಿದೆ.

ಈಗಾಗಲೇ ಇಂಗ್ಲೆಂಡ್‌ನಲ್ಲಿ ತಂಡವೊಂದು 481 ರನ್ ದಾಖಲಿಸಿರುವ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವಕಪ್‌ನಲ್ಲಿ 500 ಹಾಗೂ ಅದಕ್ಕಿಂತ ಹೆಚ್ಚು ರನ್ ದಾಖಲಾದರೂ ಅಚ್ಚರಿಯಿಲ್ಲ. ಹೀಗಾಗಿ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯು ವಿಶ್ವಕಪ್‌ನಲ್ಲಿ ಮಾರಾಟವಾಗುವ ಸ್ಕೋರ್‌ಕಾರ್ಡ್‌ಗಳ ಮರು ಮುದ್ರಣಕ್ಕೆ ಆದೇಶಿಸಿದೆ. ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿ 500 ಸ್ಕೋರ್ ದಾಖಲಾಗುವುದನ್ನು ನಿರೀಕ್ಷಿಸಲಾಗುತ್ತಿದೆ. ನಾಟಿಂಗ್‌ಹ್ಯಾಮ್ ಈ ಬಾರಿಯ ವಿಶ್ವಕಪ್‌ನಲ್ಲಿ ಐದು ಪಂದ್ಯಗಳ ಆತಿಥ್ಯವನ್ನು ವಹಿಸಿಕೊಳ್ಳಲಿದೆ. ಜೂ.13 ರಂದು ಭಾರತ ಹಾಗೂ ನ್ಯೂಝಿಲ್ಯಾಂಡ್ ಇದೇ ಮೈದಾನದಲ್ಲಿ ಸೆಣಸಾಡಲಿವೆ. ‘‘ನಾವು ವಿಶ್ವಕಪ್‌ಗೆ ಸ್ಕೋರ್‌ಕಾರ್ಡ್‌ಗಳ ಸ್ಕೇಲ್‌ನ್ನು ಬದಲಾಯಿಸಲಿದ್ದು, 500ಕ್ಕೂ ಅಧಿಕ ಸ್ಕೋರ್ ಕಾರ್ಡ್‌ನ್ನು ಮರು ಮುದ್ರಣಗೊಳಿಸಿದ್ದೇವೆ. ಈ ಟೂರ್ನಮೆಂಟ್‌ನಲ್ಲಿ 50 ಓವರ್ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿ 500ಕ್ಕೂ ಅಧಿಕ ರನ್ ದಾಖಲಾಗುವ ಸಾಧ್ಯತೆಯಿದೆ’’ ಎಂದು ಇಸಿಬಿ ಮುಖ್ಯ ಕಾರ್ಯಾಧ್ಯಕ್ಷ ಟಾಮ್ ಹ್ಯಾರಿಸನ್ ಹೇಳಿದ್ದಾರೆ. ಮೇ 11ರಂದು ಸೌಥಾಂಪ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್(373/3)ತಂಡ ಪಾಕಿಸ್ತಾನವನ್ನು(361/7)12 ರನ್‌ಗಳಿಂದ ಸೋಲಿಸಿತ್ತು. ಮೂರು ದಿನಗಳ ಬಳಿಕ ಬ್ರಿಸ್ಟೋಲ್‌ನಲ್ಲಿ ಪಾಕಿಸ್ತಾನ ನೀಡಿದ್ದ 359 ರನ್ ಗುರಿಯನ್ನು ಕೇವಲ 4 ವಿಕೆಟ್ ಕಳೆದುಕೊಂಡು ಐದು ಓವರ್‌ಗಳು ಬಾಕಿ ಇರುವಾಗಲೇ ಯಶಸ್ವಿಯಾಗಿ ಬೆನ್ನಟ್ಟಿತ್ತು. ಇಂಗ್ಲೆಂಡ್‌ನ ಬಿಸಿಲಿನ ವಾತಾವರಣ ಹಾಗೂ ಚಪ್ಪಟೆ ಪಿಚ್‌ಗಳು, ಜೊತೆಗೆ ಬಿಳಿ ಚೆಂಡು ಸ್ವಿಂಗ್ ಆಗದೇ ಇರುವುದು ಈ ಬಾರಿ ಬೇಸಿಗೆ ವಿಶ್ವಕಪ್ ಕ್ರಿಕೆಟ್‌ನಲ್ಲಿ ಹೊಸ ಬ್ಯಾಟಿಂಗ್ ದಾಖಲೆ ನಿರ್ಮಾಣಕ್ಕೆ ಪೂರಕವಾಗಿವೆ. ಈ ಹಿಂದೆಯೂ ವಿಶ್ವಕಪ್ ಸಂದರ್ಭದಲ್ಲಿ ಏಕದಿನ ಸ್ಕೋರ್‌ನಲ್ಲಿ ಮೈಲುಗಲ್ಲು ಸ್ಥಾಪನೆಯಾಗಿತ್ತು. ಅದಕ್ಕೆ ನಿದರ್ಶನ ಇಂತಿದೆ...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News