'ರೇರಾ' ಪರಿಣಾಮಕಾರಿ ಅನುಷ್ಠಾನಕ್ಕೆ ಆಗ್ರಹಿಸಿ ಶಾಂತಿಯುತ ಧರಣಿ

Update: 2019-05-18 14:36 GMT

ಬೆಂಗಳೂರು, ಮೇ 18: ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ(ರೇರಾ)ವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿಲ್ಲ ಎಂದು ಆರೋಪಿಸಿ ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಯುನೈಟೆಡ್ ಸದಸ್ಯರು ಶಾಂತಿಯುತ ಪ್ರತಿಭಟನೆ ನಡೆಸಿದರು.

ಶನಿವಾರ ನಗರದ ಪುರಭವನದ ಮುಂಭಾಗ ಜಮಾಯಿಸಿದ ಯುನೈಟೆಡ್ ಸದಸ್ಯರು, ರೇರಾ ಕಾಯ್ದೆ ಅನುಷ್ಠಾನ ಮಾಡುವಲ್ಲಿನ ವೈಫಲ್ಯ ಸರಿಯಲ್ಲ. ಬಡಾವಣೆ ಅಥವಾ ಅಪಾರ್ಟ್‌ಮೆಂಟ್ ಯೋಜನೆಗಳಲ್ಲಿ ಶೇ.60ರಷ್ಟು ನಿವೇಶನ ಅಥವಾ ಫ್ಲಾಟ್‌ಗಳನ್ನು ಗ್ರಾಹಕರಿಗೆ ಕ್ರಯಪತ್ರ ಮಾಡಿಕೊಟ್ಟ ಯೋಜನೆಗಳಿಗೆ ಮಾತ್ರ ರೇರಾ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಆರೋಪಿಸಿದರು.

ರೇರಾ ಕಾಯ್ದೆ ಅನುಷ್ಠಾನ ಮಾಡುವಲ್ಲಿ ವೈಫಲ್ಯ, ಕೆಲವೇ ಬಿಲ್ಡರ್ ಹಾಗೂ ಡೆವಲಪರ್‌ಗಳ ಮೇಲೆ ವಿಶೇಷ ಒಲವು ತೋರಿಸುತ್ತಿದ್ದಾರೆ. ಇನ್ನು ಮೂರು ಜಿಲ್ಲಾಧಿಕಾರಿಗಳ ಕಚೇರಿಯೂ ರೇರಾ ಕೋರ್ಟ್ ಆದೇಶ ಕುರಿತು ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದರು.

ಬಡಾವಣೆಯಾಗಿದ್ದಲ್ಲಿ ರಸ್ತೆ, ಬೀದಿ ದೀಪ, ಮೂಲಸೌಕರ್ಯಗಳನ್ನು ನಿರ್ವಹಣೆಗಾಗಿ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಬೇಕು. ಅದೇ ರೀತಿ ಅಪಾರ್ಟ್‌ಮೆಂಟ್ ಅಥವಾ ಬಡಾವಣೆ ನಿರ್ಮಿಸುವ ಮುನ್ನ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮೋದನೆ ಪಡೆದ ಯೋಜನೆಯ ಅನ್ವಯವೇ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News