ಬಿಬಿಎಂಪಿ ಉಪಚುನಾವಣೆ: ನಾಮಪತ್ರ ಹಿಂಪಡೆಯಲು ಮೇ 20 ಕೊನೆಯ ದಿನ

Update: 2019-05-19 15:49 GMT

ಬೆಂಗಳೂರು, ಮೇ 19: ಪಾಲಿಕೆಯ ಕಾವೇರಿಪುರ ವಾರ್ಡ್ ಮತ್ತು ಸಗಾಯಪುರ ವಾರ್ಡ್‌ಗಳ ಉಪಚುನಾವಣೆಗೆ ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ.

ಈಗಾಗಲೇ ಕಾವೇರಿಪುರ ವಾರ್ಡ್‌ನಿಂದ 5 ಜನ ಅಭ್ಯರ್ಥಿ 10 ನಾಮಪತ್ರ ಸಲ್ಲಿಕೆಯಾಗಿದ್ದು, ಸಗಾಯಪುರ ವಾರ್ಡ್‌ನಲ್ಲಿ 14 ಜನ ಅಭ್ಯರ್ಥಿಗಳು 16 ನಾಮಪತ್ರ ಸಲ್ಲಿಕೆಯಾಗಿವೆ. ಒಟ್ಟಾರೆ 2 ವಾರ್ಡ್‌ಗಳಿಂದ 26 ನಾಮಪತ್ರ ಸಲ್ಲಿಕೆಯಾಗಿದ್ದು, ಮೇ 20 ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ. ಮೇ 29ರಂದು ಚುನಾವಣೆ ನಡೆಯಲಿದ್ದು, ಮೇ 31ರಂದು ಫಲಿತಾಂಶ ಪ್ರಕಟವಾಗಲಿದೆ.

31ರವರೆಗೆ ನೀತಿ ಸಂಹಿತೆ: ಸಗಾಯಪುರ, ಕಾವೇರಿಪುರ ವಾರ್ಡ್‌ಗಳ ಉಪ ಚುನಾವಣೆ ಘೋಷಣೆಯಾಗಿದ್ದು, ಮೇ 31ರ ತನಕ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಲೋಕಸಭಾ ಚುನಾವಣೆ ಹಿನ್ನಲೆ ಮೇ 27ರಂದು ನೀತಿ ಸಂಹಿತೆ ಪೂರ್ಣಗೊಳ್ಳಲಿದ್ದು, ಸಗಾಯಪುರ, ಕಾವೇರಿಪುರ ವಾರ್ಡ್‌ಗಳಿಗೆ ಮಾತ್ರ ಮೇ 31ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ.

ಪ್ರಚಾರ ಆರಂಭ: ಮೈತ್ರಿಕೂಟ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದ್ದು, ಮೈತ್ರಿ ಅಭ್ಯರ್ಥಿ ಪಳನಿಯಮ್ಮ, ಸುಶೀಲ ಸುರೇಶ್, ಬಿಜೆಪಿ ಅಭ್ಯರ್ಥಿ ಪಲ್ಲವಿ, ಜೈರೀಮ್ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಲೋಕಸಭಾ ಲಿತಾಂಶದ ಬಳಿಕ ಶಾಸಕರು ಪ್ರಚಾರದಲ್ಲಿ ಭಾಗವಹಿಸುವ ಸಾಧ್ಯತೆ ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News