ಬಿಎಂಟಿಸಿ-ಮೆಟ್ರೋ ಪ್ರಯಾಣಕ್ಕೆ ಒಂದೇ ಸ್ಮಾರ್ಟ್‌ಕಾರ್ಡ್

Update: 2019-05-19 16:18 GMT

ಬೆಂಗಳೂರು, ಮೇ 19: ಸಮೂಹ ಸಾರಿಗೆ ಬಳಸುವ ಪ್ರಯಾಣಿಕರು ಇನ್ನು ಮುಂದೆ ಒಂದೇ ಸ್ಮಾರ್ಟ್ ಕಾರ್ಡ್‌ನಲ್ಲಿ ಮೆಟ್ರೋ ರೈಲು ಮತ್ತು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಬಹುದಾಗಿದೆ. ಹಲವು ವರ್ಷಗಳಿಂದ ಚರ್ಚೆಯಲ್ಲಿರುವ ಬಿಎಂಟಿಸಿ ಮತ್ತು ಮೆಟ್ರೋ ಪ್ರಯಾಣಿಕರಿಗೆ ಒಂದೇ ಸ್ಮಾರ್ಟ್ ಕಾರ್ಡ್ ನೀಡುವ ಯೋಜನೆಗೆ ಅಕ್ಟೋಬರ್‌ನಲ್ಲಿ ಚಾಲನೆ ಸಿಗಲಿದೆ. ಪೈಲಟ್ ಮಾದರಿಯಲ್ಲಿ ಕೆಲವು ಕಾರ್ಡ್‌ಗಳನ್ನು ಮಾತ್ರ ಪ್ರಯಾಣಿಕರ ಬಳಕೆಗೆ ನೀಡಲಾಗುತ್ತಿದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಸಂಪೂರ್ಣವಾಗಿ ಜಾರಿ ಮಾಡಲಾಗುತ್ತದೆ.

ಮೊದಲಿಗೆ ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿಗೆ ಹೋಗಿ ಬರುವ ಪ್ರಯಾಣಿಕರಿಗೆ ಮಾತ್ರ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಆ ಕಾರ್ಡ್ ಮೂಲಕ ಬಿಎಂಟಿಸಿ ಬಸ್‌ನಲ್ಲೂ ಪ್ರಯಾಣಿಸಬಹುದಾಗಿದೆ. ಮೆಟ್ರೋ ಪ್ರವೇಶ ದ್ವಾರದಲ್ಲಿ ಅದರ ಮೂಲಕ ಒಳಬರುವ ವ್ಯವಸ್ಥೆ ಮಾಡಲಾಗತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಮಾರ್ಟ್‌ಕಾರ್ಡ್ ಸಿದ್ಧಪಡಿಸಲು ಈಗಾಗಲೇ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್)ಗೆ ವಹಿಸಲಾಗಿದೆ. ಅವರಿಗೆ ಸಿ-ಡಾಕ್ ಸಂಸ್ಥೆ ನೆರವು ನೀಡುತ್ತಿದೆ. ಸ್ಮಾರ್ಟ್‌ಕಾರ್ಡ್, ಪ್ರಯಾಣ ದರ ಕಡಿತ ಯಂತ್ರ ಸೇರಿ ಅಗತ್ಯವಿರುವ ಪರಿಕರ ಪೂರೈಕೆಗೆ ತಿಳಿಸಲಾಗಿದೆ. ಹೊಸದಿಲ್ಲಿ ಸರಕಾರ 2018ರಲ್ಲಿ ಕಾಮನ್ ಮೊಬಿಲಿಟಿ ಕಾರ್ಡ್ ಪರಿಚಯಿಸಿದ್ದು, ಅದೇ ಮಾದರಿ ಬೆಂಗಳೂರಿನಲ್ಲೂ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News