ನಟಿ ರಮ್ಯಾ ಘನತೆಗೆ ಧಕ್ಕೆ ತರುವ ಪೋಸ್ಟ್ ಪ್ರಕರಣ: ಪ್ರಾಸಿಕ್ಯೂಷನ್‌ಗೆ ಸಹಕರಿಸಲು ಅವಕಾಶ ನೀಡಲು ಮನವಿ

Update: 2019-05-19 16:20 GMT

ಬೆಂಗಳೂರು, ಮೇ 19: ನಟಿ ರಮ್ಯಾ ಅವರ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಸಹಕರಿಸಲು ಅವಕಾಶ ನೀಡಬೇಕು ಎಂದು ಕೋರಿ ದೂರುದಾರರೂ ಆದ ವಕೀಲೆ ಎಚ್.ವಿ.ಭವ್ಯ ಕೋರ್ಟ್‌ಗೆ ಮನವಿ ಮಾಡಿದ್ದಾರೆ. 

ಈ ಕುರಿತ ಮನವಿಯನ್ನು ಭವ್ಯ ಪರ ವಕೀಲರಾದ ಬಿ.ಸಂಜಯ ಯಾದವ್ ಅವರು ಸಿಟಿ ಸಿವಿಲ್ ಕೋರ್ಟ್‌ನ ರಜಾಕಾಲದ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದರು. ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಲಾಗಿದೆ.

ಈ ಪ್ರಕರಣದ ಆರೋಪಿ ನವೀನ್‌ಕುಮಾರ್, ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ಇನ್ನೂ ಹಲವು ಪ್ರಕರಣದಲ್ಲಿ ಇದೇ ರೀತಿ ನಡೆದುಕೊಂಡಿದ್ದಾರೆ ಎಂದು ಭವ್ಯ ಮನವಿಯಲ್ಲಿ ವಿವರಿಸಿದ್ದಾರೆ. ನವೀನ್ ಸಾಗರ್, ರಮ್ಯಾ ಅಭಿನಯಿಸಿದ್ದ ಸಿನಿಮಾವೊಂದರ ಪೋಟೊವನ್ನು ವಿಕೃತವಾಗಿ ಬಿಂಬಿಸಿ, ಅಶ್ಲೀಲ ಪದಗಳನ್ನು ಬಳಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ರಮ್ಯಾ ಅವರ ಘನತೆಗೆ ಧಕ್ಕೆ ತಂದು, ತೇಜೋವಧೆಗೆ ಯತ್ನಿಸಿದ್ದಾರೆ. ಹೀಗಾಗಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಅವರು ಸೈಬ್ ಕ್ರೈಂ ಠಾಣೆಗೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News