ಮತದಾನೋತ್ತರ ಸಮೀಕ್ಷೆಗಳ ಮೂಲಕ ಇವಿಎಂ ತಿರುಚುವ ತಂತ್ರ: ಮಮತಾ ಬ್ಯಾನರ್ಜಿ ಆರೋಪ

Update: 2019-05-19 17:27 GMT

ಹೊಸದಿಲ್ಲಿ, ಮೇ 19: ಮತದಾನೋತ್ತರ ಸಮೀಕ್ಷೆಗಳು ‘ಗಾಸಿಪ್ ಗಳು’ ಎಂದಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಇಂತಹ ಸಮೀಕ್ಷೆಗಳನ್ನು ತಾನು ನಂಬುವುದಿಲ್ಲ. ಇವಿಎಂಗಳನ್ನು ತಿರುಚುವ ಉದ್ದೇಶದಿಂದ ನಡೆಸಿರುವ ‘ಗೇಮ್ ಪ್ಲ್ಯಾನ್’ಗಳಿವು ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ಅಧಿಕಾರ ಹಿಡಿಯಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ತಿಳಿಸಿವೆ.

“ಮತದಾನೋತ್ತರ ಸಮೀಕ್ಷೆಗಳೆಂಬ ಗಾಸಿಪ್ ಗಳನ್ನು ನಾನು ನಂಬುವುದಿಲ್ಲ. ಈ ಗಾಸಿಪ್ ಮೂಲಕ ಸಾವಿರಾರು ಇವಿಎಂಗಳನ್ನು ಬದಲಿಸಲು ಮತ್ತು ತಿರುಚಲು ಗೇಮ್ ಪ್ಲ್ಯಾನ್ ನಡೆದಿದೆ. ಎಲ್ಲಾ ವಿಪಕ್ಷಗಳು ಒಂದಾಗಬೇಕು ಎಂದು ನಾನು ಮನವಿ ಮಾಡುತ್ತಿದ್ದೇನೆ. ನಾನು ಇದರ ವಿರುದ್ಧ ಒಗ್ಗಟ್ಟಾಗಿ ಹೋರಾಡಬಹುದು” ಎಂದು ಮಮತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News