ಶಾಸಕ ಎಲ್.ಎ.ರವಿಸುಬ್ರಹ್ಮಣ್ಯರಿಂದ ಜಾನಪದ ಕಲಾ ಮೇಳ ಉದ್ಘಾಟನೆ

Update: 2019-05-19 17:45 GMT

ಬೆಂಗಳೂರು, ಮೇ 19: ಶ್ರೀರಾಮಾಂಜನೇಯ ಸಾಂಸ್ಕೃತಿಕ ಹಾಗೂ ಯುವ ಕಲಾವೃಂದ ದಶಮಾನೋತ್ಸವದ ಅಂಗವಾಗಿ ಉದಯಭಾನು ಕಲಾಸಂಘದಲ್ಲಿ ಆಯೋಜಿಸಿದ್ದ ಜಾನಪದ ಕಲಾ ಮೇಳ-2019ನ್ನು ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ಉದ್ಘಾಟಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳಾದ ರಂಗಗೀತೆಗಳನ್ನು ಹಿರಿಯ ರಂಗಕರ್ಮಿ ಆರ್. ಪರಮಶಿವನ್ ನಡೆಸಿಕೊಟ್ಟರು. ಕೆ.ಎನ್.ಬಿಂಧು ಮತ್ತು ತಂಡದಿಂದ ಜಾನಪದ ನೃತ್ಯ ರೂಪಕ ನಡೆಯಿತು. ಮೈಸೂರು ರಮಾನಂದ ಮತ್ತು ತಂಡದಿಂದ ಗುಲಾಮನ ರಹಸ್ಯ ಸಾಮಾಜಿಕ ಹಾಸ್ಯಭರಿತ ನಾಟಕ, ವೇಣುಗೋಪಾಲ್ ಮತ್ತು ತಂಡದಿಂದ ಕೃಷ್ಣದೇವರಾಯ ಐತಿಹಾಸಿಕ ನಾಟಕ ಪ್ರದರ್ಶನಗೊಂಡಿತು. ಸ್ಫೂರ್ತಿ ಕಲಾವಿದರಿಂದ ಎರುಮೈಂದೆ ತುಳು ನಾಟಕ, ಮಂಜುನಾಥ್ ಮತ್ತು ತಂಡದಿಂದ ರೊಟ್ಟಿ ಋಣ, ಮಹೇಶ್ ಸಾಗರ್ ತಂಡದಿಂದ ಗುಂಡೂ ಬಳಗ, ಶಿವಮೂರ್ತಿ ತಂಡದಿಂದ ಕೃಷ್ಣಸಂಧಾನ ನಾಟಕ ನಡೆಯಿತು.

ಕಾರ್ಯಕ್ರಮದಲ್ಲಿ ಪೂಜಾ ಕುಣಿತ, ಡೊಳ್ಳು ಕುಣಿತ, ತಮಟೆ ವಾದನ, ಗಾರುಡಿ ಗೊಂಬೆ, ಪಟಕುಣಿ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಸಾಹಿತಿ ಡಾ.ದೊಡ್ಡರಂಗೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಭೃಂಗೀಶ್, ಭಾರತೀಯ ಸಾಂಸ್ಕೃತಿಕ ಸಂಬಂಧಗಳು ಪರಿಷತ್ ಸದಸ್ಯ ಡಾ.ಅಪ್ಪಗೆರೆ ತಿಮ್ಮರಾಜು, ರಾಜ್ಯ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶ ಲಕ್ಷ್ಮೀಪತಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News