ನಡಾಲ್‌ಗೆ 9ನೇ ಇಟಾಲಿಯನ್ ಓಪನ್ ಪ್ರಶಸ್ತಿ

Update: 2019-05-19 18:35 GMT

ರೋಮ್, ಮೇ 19: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್‌ರನ್ನು ರವಿವಾರ ನಡೆದ ಫೈನಲ್‌ನಲ್ಲಿ 6-0, 4-6, 6-1 ಸೆಟ್‌ಗಳಿಂದ ಮಣಿಸಿದ ರಫೆಲ್ ನಡಾಲ್ ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ 9ನೇ ಬಾರಿ ಪ್ರಶಸ್ತಿ ಎತ್ತಿ ಹಿಡಿದರು. ಸ್ಪೇನ್ ಆಟಗಾರ ನಡಾಲ್ 34ನೇ ಮಾಸ್ಟರ್ಸ್ ಪ್ರಶಸ್ತಿ ಜಯಿಸುವ ಮೂಲಕ ಜೊಕೊವಿಕ್(33 ಪ್ರಶಸ್ತಿ)ಸಾಧನೆಯನ್ನು ಹಿಂದಿಕ್ಕಿದರು. ಗರಿಷ್ಠ ಮಾಸ್ಟರ್ಸ್ ಪ್ರಶಸ್ತಿ ಜಯಿಸಿದವರ ಯಾದಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಕಳೆದ ವಾರ ಮ್ಯಾಡ್ರಿಡ್ ಓಪನ್ ಪ್ರಶಸ್ತಿ ಜಯಿಸಿದ್ದ ಜೊಕೊವಿಕ್ ಎರಡನೇ ರ್ಯಾಂಕಿನ ನಡಾಲ್ ವಿರುದ್ಧ 54ನೇ ಮುಖಾಮುಖಿಯಲ್ಲಿ ಮುಗ್ಗರಿಸಿದರು. ಜೊಕೊವಿಕ್ ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ 2ನೇ ಸೆಮಿ ಫೈನಲ್‌ನಲ್ಲಿ ಅರ್ಜೆಂಟೀನದ ಡಿಯಾಗೊ ಸ್ಚೆವರ್ಟ್‌ಮನ್‌ರನ್ನು 6-3, 6-7(2/7), 6-3 ಸೆಟ್‌ಗಳಿಂದ ಸೋಲಿಸಿದ್ದರು. 17 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್ ವಾರವಿಡೀ ಒಂದೂ ಸೆಟನ್ನು ಕೈಚೆಲ್ಲದೆ ಟೂರ್ನಿಯಲ್ಲಿ 11ನೇ ಬಾರಿ ಫೈನಲ್‌ಗೆ ತಲುಪಿದ್ದರು. ಇದೀಗ ಪ್ರಶಸ್ತಿ ಎತ್ತಿ ಹಿಡಿದು ಮುಂಬರುವ ಫ್ರೆಂಚ್ ಓಪನ್‌ನಲ್ಲಿ 12ನೇ ಪ್ರಶಸ್ತಿ ಗೆಲ್ಲುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News