ಕರ್ನಾಟಕಕ್ಕೆ ಸಿಗಲಿದೆ ಮೊದಲ ಎಲೆಕ್ಟ್ರಿಕ್ ಲೋಕೋ ಶೆಡ್: ಕೆ.ಆರ್.ಪುರಂ ರೈಲ್ವೆ ನಿಲ್ದಾಣದಲ್ಲಿ ಸ್ಥಾಪನೆ

Update: 2019-05-20 17:46 GMT

ಬೆಂಗಳೂರು, ಮೇ 20: ಸೌತ್ ವೆಸ್ಟ್ರನ್ ರೈಲ್ವೆ ವಲಯದಲ್ಲಿ ರೈಲು ಹಳಿಗಳ ವಿದ್ಯುದೀಕರಣ ಭರದಿಂದ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಇಂಜಿನ್‌ಗಳನ್ನು ನಿರ್ವಹಣೆ ಮಾಡುವ ವ್ಯವಸ್ಥೆ ಪ್ರಾಮುಖ್ಯತೆ ಪಡೆಯಲಿದೆ. ಪ್ರಸ್ತುತ ಕೆ.ಆರ್.ಪುರಂನಲ್ಲಿರುವ ಡೀಸೆಲ್ ಲೋಕೋ ಶೆಡ್‌ನ್ನು ಎಲೆಕ್ಟ್ರಿಕ್ ಲೋಕೋ ಶೆಡ್‌ನ್ನಾಗಿ ಮಾರ್ಪಾಡು ಮಾಡಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಲೋಕೋ ಶೆಡ್ ಸ್ಥಾಪನೆಯಾಗಲಿದೆ.

ಬೆಂಗಳೂರು ಮೂಲದ ಬಾಲಾಜಿ ಬಿಲ್ಡರ್ಸ್‌ಗೆ ಈ ಗುತ್ತಿಗೆ ಲಭ್ಯವಾಗಿದ್ದು, ವರ್ಷಾಂತ್ಯ ಅಥವಾ 2020ರ ಜನವರಿಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 1983ರಲ್ಲಿ ಜಾಫರ್ ಶರೀಫ್ ರೈಲ್ವೆ ಸಚಿವರಾಗಿದ್ದಾಗ ಕೆ.ಆರ್.ಪುರಂಗೆ ಡೀಸೆಲ್ ಲೊಕೋ ಶೆಡ್ ಸ್ಥಾಪನೆಯಾಗಿತ್ತು. ಡೀಸೆಲ್ ಶೆಡ್‌ಗೆ ಲಭ್ಯವಿರುವ ಮೂಲಸೌಕರ್ಯದ ಶೇ.80ರಷ್ಟನ್ನು ಎಲೆಕ್ಟ್ರಿಕ್ ಶೆಡ್‌ಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹಿರಿಯ ವಿಭಾಗೀಯ ಮೆಕ್ಯಾನಿಕಲ್ ಇಂಜಿನಿಯರ್ ಬಿ.ಮುರಳಿ ಕೃಷ್ಣ ಅವರು ಡೀಸೆಲ್ ಲೋಕೋ ಶೆಡ್ ಬಗ್ಗೆ ಮಾಹಿತಿ ನೀಡಿದ್ದಾರೆ. ಶೇ.20ರಷ್ಟು ಮೂಲಸೌಕರ್ಯವನ್ನು ಹೊಸದಾಗಿ ನಿರ್ಮಿಸಬೇಕಿದ್ದು, ಇದಕ್ಕಾಗಿ ಒಟ್ಟಾರೆ 10 ಕೋಟಿ ರೂ.ಖರ್ಚಾಗಲಿದೆ ಎಂದು ಮುರಳಿಕೃಷ್ಣ ಹೇಳಿದ್ದಾರೆ.

ಎರಡು ಹೊಸ ಶೆಡ್‌ಗಳು ನಿರ್ಮಾಣವಾಗಲಿದೆ. ಓವರ್ ಹೆಡ್ ಲೈಟ್, ಓವರ್ ಹೆಡ್ ಲೈನ್, ಟ್ರಾಕ್ಷನ್ ಮೋಟಾರ್, ಟ್ರಾನ್ಸ್‌ಫಾರ್ಮರ್, ಇಂಜಿನ್‌ಗಳನ್ನು ಮೇಲೆತ್ತುವ 5 ಟನ್ ಕೆ್ರೀನ್ ವಿಭಾಗಗಳು ಸ್ಥಾಪನೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News