ಭಾರತಕ್ಕೆ ಹೊಸ ಪಾಕ್ ಹೈಕಮಿಷನರ್ ನೇಮಕ

Update: 2019-05-21 03:41 GMT

ಇಸ್ಲಾಮಾಬಾದ್, ಮೇ 21: ವೃತ್ತಿಪರ ರಾಜತಂತ್ರಜ್ಞ ಮೊಯಿನ್ ಉಲ್ ಹಕ್ ಅವರನ್ನು ಭಾರತಕ್ಕೆ ಪಾಕಿಸ್ತಾನದ ಹೈಕಮಿಷನರ್ ಆಗಿ ಪಾಕ್ ಸರ್ಕಾರ ನೇಮಕ ಮಾಡಿದೆ.

ಭಾರತ, ಚೀನಾ ಹಾಗೂ ಜಪಾನ್ ಸೇರಿದಂತೆ ಹಲವು ದೇಶಗಳಿಗೆ ಹೊಸ ರಾಯಭಾರಿಗಳ ನೇಮಕಾತಿಗಳಿಗೆ ಪ್ರಧಾನಿ ಇಮ್ರಾನ್ ಖಾನ್ ಸೋಮವಾರ ಅನುಮೋದನೆ ನೀಡಿದರು.

ಹಕ್ ಸದ್ಯ ಫ್ರಾನ್ಸ್ ರಾಯಭಾರಿಯಾಗಿದ್ದು, ಇದಕ್ಕೂ ಮುನ್ನ ಪಾಕಿಸ್ತಾನ ವಿದೇಶಾಂಗ ಕಚೇರಿಯಲ್ಲಿ ಮುಖ್ಯ ಶಿಷ್ಟಾಚಾರ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಭಾರತದಲ್ಲಿ ಹೈಕಮಿಷನರ್ ಆಗಿದ್ದ ಸೊಹೈಲ್ ಮೆಹಮೂದ್ ಅವರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಿದ ಬಳಿಕ ಈ ಹುದ್ದೆ ಖಾಲಿ ಇತ್ತು.

ಪ್ರಧಾನಿ ಇಮ್ರಾನ್ ಖಾನ್ ಮತ್ತು ವಿದೇಶಾಂಗ ಸಚಿವ ಶಾ ಮುಹಮ್ಮದ್ ಖುರೇಷಿ ವಿವರವಾದ ಚರ್ಚೆ ನಡೆಸಿದ ಬಳಿಕ ವೀಡಿಯೊ ಸಂದೇಶದಲ್ಲಿ ಈ ನೇಮಕವನ್ನು ಘೋಷಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News