ರಿಯಾದ್: ಕೆಸಿಎಫ್ ನಿಂದ ‘ಗ್ರ್ಯಾಂಡ್ ಇಫ್ತಾರ್ ಮುಲಾಖಾತ್ – 2019’

Update: 2019-05-21 04:33 GMT

ರಿಯಾದ್, ಮೇ 21: ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ರಿಯಾದ್ ಝೋನಲ್ ವತಿಯಿಂದ ‘ಗ್ರ್ಯಾಂಡ್ ಇಫ್ತಾರ್ ಮುಲಾಖಾತ್ – 2019’ ಕಾರ್ಯಕ್ರಮ ಇಲ್ಲಿನ ನೂರ್ ಮಾಸ್ ಆಡಿಟೋರಿಯಂನಲ್ಲಿ ನಡೆಯಿತು.

ಸಮಾರಂಭವನ್ನು ಕೇರಳ ಎಸ್ಸೆಸ್ಸೆಫ್ ಮಾಜಿ ಅಧ್ಯಕ್ಷ ಸೈಯ್ಯದ್ ತುರಾಬ್ ತಂಙಳ್ ಉದ್ಘಾಟಿಸಿ ಕೆಸಿಎಫ್ ಮಾಡುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷ ಫಾರೂಕ್ ಸಅದಿ ಎಚ್.ಕಲ್ಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೆಸಿಎಫ್ ರಾಷ್ಟ್ರೀಯ ಸಮಿತಿಯ ಶಿಕ್ಷಣ ಇಲಾಖೆಯ ಅಧ್ಯಕ್ಷ ಸಿದ್ದೀಕ್ ಸಖಾಫಿ ಪೆರುವಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೆಸಿಎಫ್ ಉತ್ತರ ಕರ್ನಾಟಕದಲ್ಲಿ ಮಾಡುತ್ತಿರುವ ಸಮಾಜ ಸೇವಾ ಚಟುವಟಿಕೆಗಳನ್ನು  ವಿವರಿಸಿದರು.

ನಂತರ ನಡೆದ ಹ್ರಸ್ವ ಚಿತ್ರಣದಲ್ಲಿ ಕಳೆದ ಹಲವಾರು ವರ್ಷಗಳಿಂದ ಕೆ.ಸಿ.ಎಫ್ ಯಶಸ್ವಿಯಾಗಿ ನಡೆಸಿದ ಉತ್ತರ ಕರ್ನಾಟಕದ ‘ಇಹ್ಸಾನ್’, ಎಚ್.ವಿ.ಸಿ., ಸಾಂತ್ವನ ಹಾಗೂ ಮುಂತಾದ ಯೋಜನೆಗಳನ್ನು ಪ್ರದರ್ಶಿಸಲಾಯಿತು.

ರಿಯಾದ್ ಝೋನಲ್ ಕೋಶಾಧಿಕಾರಿ ಹಾಗೂ ಇಫ್ತಾರ್ ಸ್ವಾಗತ ಸಮಿತಿಯ ಅಧ್ಯಕ್ಷ ಉಮರ್ ಹಾಜಿ ಅಳಕೆಮಜಲು ಮಾತನಾಡಿದರು.

ಸೌದಿ ದೂತವಾಸದ ನೋರ್ಕಾ ಜನರಲ್ ಅಸಿಸ್ಟಂಟ್ ಶಿಹಾಬ್ ಕೊಟ್ಟುಗಾಡು ಭಾಗವಹಿಸಿ ಶುಭಹಾರೈಸಿದರು.

ಇದೇ ಸಂದರ್ಭ ಕೆಸಿಎಫ್ ಮುಖವಾಣಿ ಗಲ್ಫ್ ಇಶಾರ ಚಂದಾ ಅಭಿಯಾನದಲ್ಲಿ ಬಂಪರ್ ಬಹುಮಾನ ವಿಜೇತ ಅಶ್ರಫ್ ರಬುವರಿಗೆ ಚಿನ್ನದ ನಾಣ್ಯ ಹಾಗೂ ಲಕ್ಕಿ ಡ್ರಾ ಮೂಲಕ ವಿಜೇತರಾದ ಇಬ್ರಾಹಿಂ'ರವರಿಗೆ ಉಚಿತ ಉಮ್ರಾ ಟಿಕೆಟ್ ನೀಡಲಾಯಿತು.

ಐಸಿಎಫ್ ಪ್ರತಿನಿಧಿ ಉಮರ್ ಮುಸ್ಲಿಯಾರ್ ಪನ್ನಿಯೂರು, ಅಬ್ದುರ್ರಝಾಕ್ ಹಾಜಿ ಉಜಿರೆ, ಆರ್.ಎಸ್.ಸಿ. ನಾಯಕ ಲತೀಫ್ ಸಅದಿ ಉರುಮಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಕೆ.ಎಸ್.ಡಬ್ಲ್ಯು. ನ್ಯಾಷನಲ್ ಸಮಿತಿಯ ಅಧ್ಯಕ್ಷ ಅಬ್ದುಲ್ ಖಾದರ್ ತಂಙಳ್ ಕೊಡಗು, ಸಯ್ಯದ್ ಜಾಫರ್ ಸ್ವಾದಿಖ್ ತಂಙಳ್, ಅಶ್ರಫ್ ಓಚ್ಚಿರ, ಝೋನಲ್ ಇಹ್ಸಾನ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಮದನಿ, ಬತ್ತಾ ಸೆಕ್ಟರ್ ಅಧ್ಯಕ್ಷ ಅಬ್ದುಲ್ ರಝಾಕ್ ಮುಸ್ಲಿಯಾರ್ ನಾಟೆಕಲ್, ರಬುವ ಸೆಕ್ಟರ್ ಅಧ್ಯಕ್ಷ ನಝೀರ್ ಮುಸ್ಲಿಯಾರ್ ನಂದಾವರ, ಮುರೂಜ್ ಸೆಕ್ಟರ್ ಅಧ್ಯಕ್ಷರಾದ ಪಿ.ಕೆ.ದಾವೂದ್ ಸಅದಿ ಉರುವಾಲು ಪದವು, ಸನಯ್ಯ ಸೆಕ್ಟರ್ ಅಧ್ಯಕ್ಷ ಇದ್ದಿನ್ ಕುಂಞಿ ಸೇರಾಜೆ, ಬದಿಯ್ಯ ಸೆಕ್ಟರ್ ಅಧ್ಯಕ್ಷ ಹಮೀದ್ ಮುಲ್ಕಿ, ಐ.ಎನ್.ಸಿ. ಮುಖಂಡರಾದ ನಝೀರ್ ಹಾಜಿ ಕಾಶಿಪಟ್ನ, ಹಂಝ ಮೈಂದಾಳ, ಹನೀಫ್ ಕಣ್ಣೂರು, ಇಸ್ಮಾಯಿಲ್ ಮೊಂಟೆಪದವು, ಅಶ್ರಫ್ ಕಿಲ್ಲೂರು, ಹಾಗೂ ಇತರ ಉಪ ಸಮಿತಿಗಳ ನೇತಾರರಾದ ಮಜೀದ್ ವಿಟ್ಲ, ಯೂಸುಫ್ ಹಾಜಿ ಕಳಂಜಿಬೈಲು, ನಝೀರ್ ಕಕ್ಕಿಂಜೆ, ಹಬೀಬ್ ಟಿ.ಎಚ್., ಇಸ್ಮಾಯಿಲ್ ಕನ್ನಂಗಾರು, ನವಾಝ್ ಚಿಕ್ಕಮಗಳೂರು, ಝಹೀರ್ ಅಬ್ಬಾಸ್, ಶಮೀರ್ ಜೆಪ್ಪು, ರಮೀಝ್ ಕುಳಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದಕ್ಕೂ ನಡೆದ ಆಧ್ಯಾತ್ಮಿಕ ಮಜ್ಲಿಸ್'ಗೆ ಇಲ್ಯಾಸ್ ಲತ್ವೀಫಿ ನೇತೃತ್ವ ನೀಡಿದರು. ರಿಯಾದ್ ಝೋನಲ್ ಪ್ರ.ಕಾರ್ಯದರ್ಶಿ ನಿಝಾಮ್ ಸಾಗರ್ ಸ್ವಾಗತಿಸಿದರು. ಸ್ವಾಗತ ಸಮಿತಿಯ ಕಾರ್ಯದರ್ಶಿ ಅನ್ಸಾರ್ ಮುಹಮ್ಮದ್ ಉಳ್ಳಾಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News