ಕ್ರೈಸ್ಟ್‌ಚರ್ಚ್ ದಾಳಿ: ಆರೋಪಿ ವಿರುದ್ಧ ಭಯೋತ್ಪಾದನೆ ಆರೋಪ

Update: 2019-05-21 18:29 GMT

ವೆಲಿಂಗ್ಟನ್ (ನ್ಯೂಝಿಲ್ಯಾಂಡ್), ಮೇ 21: ನ್ಯೂಝಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್ ನಗರದ ಎರಡು ಮಸೀದಿಗಳ ಮೇಲೆ ದಾಳಿ ನಡೆಸಿ 51 ಮುಸ್ಲಿಮರನ್ನು ಕೊಂದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ವಿರುದ್ಧ ಮಂಗಳವಾರ ಔಪಚಾರಿಕವಾಗಿ ಭಯೋತ್ಪಾದನೆ ಆರೋಪವನ್ನು ಹೊರಿಸಲಾಗಿದೆ ಎಂದು ನ್ಯೂಝಿಲ್ಯಾಂಡ್ ಪೊಲೀಸರು ತಿಳಿಸಿದರು.

ಭಯೋತ್ಪಾದನೆ ಆರೋಪಕ್ಕೆ ಹೆಚ್ಚುವರಿಯಾಗಿ ಬ್ರೆಂಟನ್ ಟ್ಯಾರಂಟ್ ವಿರುದ್ಧ 51 ಕೊಲೆ ಮೊಕದ್ದಮೆಗಳು ಮತ್ತು 40 ಕೊಲೆಯತ್ನ ಮೊಕದ್ದಮೆಗಳನ್ನು ಹೂಡಲಾಗಿದೆ.

ಆರೋಪಿಯು ಮಾರ್ಚ್ 15ರಂದು ಎರಡು ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಗಳಲ್ಲಿ ನಿರತರಾಗಿದ್ದ ಮುಸ್ಲಿಮರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದನು. ದಾಳಿಯಲ್ಲಿ 51 ಮಂದಿ ಮೃತಪಟ್ಟರೆ, 40 ಮಂದಿ ಗಾಯಗೊಂಡಿದ್ದರು.

ಪ್ರಾಸಿಕ್ಯೂಟರ್‌ಗಳು ಮತ್ತು ಸರಕಾರಿ ಕಾನೂನು ಪರಿಣತರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, ದಾಳಿ ನಡೆದ ಎರಡು ತಿಂಗಳಿಗೂ ಅಧಿಕ ಸಮಯದ ನಂತರ ಆರೋಪಿಯ ವಿರುದ್ಧ ಭಯೋತ್ಪಾದನೆ ಆರೋಪವನ್ನು ಹೊರಿಸಲು ನಿರ್ಧರಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News