ಇವಿಎಂ ಹ್ಯಾಕ್ ಮಾಡಲು ಸಾಧ್ಯವಿಲ್ಲ: ಐಪಿಎಸ್ ಅಧಿಕಾರಿ ಡಿ.ರೂಪಾ

Update: 2019-05-22 13:02 GMT

ಬೆಂಗಳೂರು, ಮೇ 22: ವಿದ್ಯುನ್ಮಾನ ಮತ ಯಂತ್ರ(ಇವಿಎಂ)ಗಳನ್ನು ಯಾವುದೇ ಕಾರಣಕ್ಕೂ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಐಪಿಎಸ್ ಅಧಿಕಾರಿ ಡಿ.ರೂಪಾ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಇವಿಎಂ ಹ್ಯಾಕ್ ಮಾಡುವುದು ಅಸಾಧ್ಯ. ಚುನಾವಣೆಯಲ್ಲಿ ಕೆಲಸ ಮಾಡಿರುವ ಎಲ್ಲ ಐಎಎಸ್ ಅಧಿಕಾರಿಗಳು ಹಾಗೂ ಆಡಳಿತಾತ್ಮಕ ಸೇವೆಯಲ್ಲಿರುವ ಎಲ್ಲ ರಾಜ್ಯದ ಅಧಿಕಾರಿಗಳಿಗೂ ಆ ಬಗ್ಗೆ ಗೊತ್ತು. ನಾವೆಲ್ಲರೂ ಇವಿಎಂಗಳ ಮೂಲಕ ಚುನಾವಣೆ ಎದುರಿಸುತ್ತಿದ್ದೇವೆ ಎಂಬುದನ್ನು ಮರೆತಿದ್ದೇವೆ ಎಂದು ಅವರು ಹೇಳಿದ್ದಾರೆ.

ಇವಿಎಂಗಳು ಹ್ಯಾಕ್ ಆಗ್ತಿವೆ ಎಂದು ಹೇಳುವುದು ಅನ್ಯಾಯ. ಏಕೆಂದರೆ ಚುನಾವಣಾ ಪೂರ್ವ, ಮತದಾನದ ದಿನ ಹಾಗೂ ಚುನಾವಣಾ ನಂತರ ಇವಿಎಂಗಳು ಅಧಿಕಾರಿಗಳ ಕೊಠಡಿಯಲ್ಲಿರುತ್ತವೆ. ಚುನಾವಣೆ ನಡೆಸಲು ಅಧಿಕಾರಿಗಳು ಬೆವರು ಸುರಿಸುತ್ತಾರೆ, ಹೊರತು ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ತಮ್ಮ ಕೆಲಸ ಬಿಟ್ಟು, ಕೆಲಸಕ್ಕೆ ಕುತ್ತು ತರುವ ಸಾಹಸವನ್ನು ಎಂದೂ ಮಾಡುವುದಿಲ್ಲ. ಇದನ್ನು ಯಾವುದೇ ರಾಜಕೀಯಕ್ಕಾಗಿ ಉದ್ದೇಶಕ್ಕಾಗಿ ನಾನು ಹೇಳುತ್ತಿಲ್ಲ ಎಂದು ಡಿ.ರೂಪಾ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News