ಮಾಧ್ಯಮ ಕೇಂದ್ರಕ್ಕೆ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಚಾಲನೆ

Update: 2019-05-22 16:45 GMT

ಬೆಂಗಳೂರು, ಮೇ 22: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಾಧ್ಯಮದವರ ಅನುಕೂಲಕ್ಕಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೇಂದ್ರ ಕಚೇರಿಯಲ್ಲಿ ತೆರೆದಿರುವ ಮಾಧ್ಯಮ ಕೇಂದ್ರವನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಉದ್ಘಾಟಿಸಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಸಂದರ್ಭದಲ್ಲಿ ಮತ ಎಣಿಕಾ ದಿನದಂದು ಮಾಧ್ಯಮ ಕೇಂದ್ರ ತೆರೆದಿದ್ದು, ಇಲ್ಲಿ ಕ್ಷಣ ಕ್ಷಣದ ಚುನಾವಣಾ ಫಲಿತಾಂಶ ಪ್ರಕಟಿಸಲು ಅನುವಾಗುವಂತೆ ಸಕಲ ವ್ಯವಸ್ಥೆ ಮಾಡಲಾಗಿದೆ. ಅಂತರ್ಜಾಲ ಸೌಲಭ್ಯ ಸಹಿತ 30 ಕಂಪ್ಯೂಟರ್‌ಗಳು, 2 ಎಲ್‌ಇಡಿ ಪರದೆ ಹಾಗೂ 15 ವಿಶಾಲ ಪರದೆಯ ಟಿವಿಗಳನ್ನು ಅಳವಡಿಸಲಾಗಿದೆ.

ಒಂದು ಪರದೆಯಲ್ಲಿ ರಾಷ್ಟ್ರೀಯ ಸೂಚನಾ ಕೇಂದ್ರದ ಸಂಪರ್ಕವಿರುವ ಪರದೆಯಲ್ಲಿ ಮತ ಎಣಿಕೆಗೆ ಸಂಬಂಧಿಸಿದಂತೆ ನಿಖರ ಮಾಹಿತಿ ದೊರೆಯುತ್ತದೆ. ಮತ್ತೊಂದು ಪರದೆಯಲ್ಲಿ ವಾರ್ತಾ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕಾ ಕೇಂದ್ರಗಳಲ್ಲಿ ಹಾಜರಿದ್ದು, ಮತ ಎಣಿಕೆಗೆ ಸಂಬಂಧಿಸಿದಂತೆ ಸಂಗ್ರಹಿಸಿ ರವಾನಿಸುವ ಅಂಕಿ ಅಂಶಗಳು ಪ್ರದರ್ಶಿತವಾಗುತ್ತಿರುತ್ತವೆ.

ಮಾಧ್ಯಮ ಕೇಂದ್ರದಲ್ಲಿ ಕೇವಲ ಮಾಧ್ಯಮದವರು ಮಾತ್ರವಲ್ಲದೆ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಆಗಮಿಸಿ ಚುನಾವಣೆಯ ಫಲಿತಾಂಶ ಕುರಿತಂತೆ ತಮ್ಮ ಅನಿಸಿಕೆ - ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಮಾಧ್ಯಮ ಕೇಂದ್ರವು ಇಂದು ಬೆಳಗ್ಗೆ 7-00 ಗಂಟೆಯಿಂದ ಆರಂಭವಾಗಿ ಸಂಪೂರ್ಣ ಫಲಿತಾಂಶ ಪ್ರಕಟಗೊಳ್ಳುವವರೆಗೆ ತೆರೆದಿರುತ್ತದೆ. ಮಾಧ್ಯಮ ಕೇಂದ್ರದ ಕಾರ್ಯ ಚಟುವಟಿಕೆಗಳಿಗೆ ಪೂರಕವಾಗಿ ಇಲಾಖೆಯ ನೂರಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ನೇರವಾಗಿ ಹಾಗೂ ಪರೋಕ್ಷವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿಜಯ್ ಭಾಸ್ಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News