ಬೇಂದ್ರಯವರ ಸಾಹಿತ್ಯ ಸಾರ್ವಕಾಲಿಕ ಸತ್ಯ ಹೇಳುತ್ತದೆ: ಹಿರಿಯ ಚಿಂತಕ ಡಾ.ಕೃಷ್ಣಪ್ಪ

Update: 2019-05-22 17:37 GMT

ಬೆಂಗಳೂರು, ಮೇ 22: ಬಡತನದ ಜೀವನದಲ್ಲಿ ಸಂಕಷ್ಟಗಳನ್ನು ಅನುಭವಿಸಿ ಅತ್ಯಂತ ಎತ್ತರಕ್ಕೆ ಬೆಳೆದ ಮಹಾನುಭಾವ ದ.ರಾ.ಬೇಂದ್ರ ಅವರ ಸಾಹಿತ್ಯ ಸಾರ್ವಕಾಲಿಕ ಸತ್ಯವನ್ನು ಹೇಳುತ್ತದೆ ಎಂದು ಹಿರಿಯ ಚಿಂತಕ ಡಾ.ಜಿ.ಕೃಷ್ಣಪ್ಪ ಇಂದಿಲ್ಲಿ ಅಭಿಮತ ವ್ಯಕ್ತಪಡಿಸಿದ್ದಾರೆ.

ಬುಧವಾರ ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಕಾಲೇಜಿನಲ್ಲಿ ಏರ್ಪಡಿಸಿದ್ದ ದ.ರಾ. ಬೇಂದ್ರ ಅವರ ಬದುಕು-ಬರಹ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೇಂದ್ರೆಯವರ ಅನುಭವ, ಆದರ್ಶ ಗುಣಗಳು ಇಂದಿನ ಯುವಜನತೆಗೆ ಮಾದರಿಯಾಗಲಿ ಎಂದು ಅಪೇಕ್ಷೆಪಟ್ಟರು.

ಅತ್ಯಂತ ಮೌಲಿಕ ಸಾಹಿತ್ಯವನ್ನು ರಚನೆ ಮಾಡಿರುವ ಬೇಂದ್ರೆಯವರನ್ನು ಮತ್ತೆ ಮತ್ತೆ ಚರ್ಚೆ, ಅಧ್ಯಯನಕ್ಕೆ ಒಳಪಡಿಸಿದಾಗ ಅವರ ಬದುಕಿನ ಮಹತ್ವ, ರಸಾನುಭವ, ವಿಚಾರಧಾರೆ, ಪ್ರಬುದ್ದ ಜ್ಞಾನ, ಆದರ್ಶ ಮಾದರಿಯಾಗುತ್ತದೆ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದರು.

ಈ ವೇಳೆ ಡಾ.ಶುಭಾಶ್ರೀ ವಾಸ್ತವ್, ಕಾಲೇಜಿನ ಪ್ರಾಂಶುಪಾಲ ರೆ.ಫಾ.ಡಾ. ಸಾಬುಜಾರ್ಜ್, ಡಾ.ತಮಿಳ್ ಸೆಲ್ವಿ, ಡಾ.ಅಪ್ಪಗೆರೆ ಸೋಮಶೇಖರ್, ಡಾ. ಮುಖೇಶ್ ಕುಮಾರ ಮಿಶ್ರಾ, ಡಾ.ಉಷಾರಾಣಿ ರಾವ್, ಮಾದೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News