ಯುವತಿಗೆ ಲೈಂಗಿಕ ಕಿರುಕುಳ ಆರೋಪ: ಸಾಫ್ಟ್‌ವೇರ್ ಇಂಜನಿಯರ್ ಬಂಧನ
Update: 2019-05-24 22:11 IST
ಬೆಂಗಳೂರು, ಮೇ 24: ಯುವತಿಯನ್ನು ಮನೆಗೆ ಕರೆದು ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಸಾಫ್ಟ್‌ವೇರ್ ಇಂಜನಿಯರ್‌ನನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಪುಲಕೇಶಿನಗರದ ಆದಿತ್ಯಾ ಶುಕ್ಲಾ ಜೈನ್ ಬಂಧಿತ ಆರೋಪಿ ಎನ್ನಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿದ್ದ ಯುವತಿಯನ್ನು ರೂಪದರ್ಶಿ ಮಾಡುತ್ತೇನೆಂದು ಮನೆಗೆ ಆಹ್ವಾನಿಸಿ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ನೀಡಿದ ದೂರಿನ್ವಯ ಆರೋಪಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.