ಇಂಗ್ಲೆಂಡ್ ನಾಯಕ ಮೊರ್ಗನ್‌ಗೆ ಗಾಯ

Update: 2019-05-25 06:12 GMT

ಲಂಡನ್, ಮೇ 24: ಅಭ್ಯಾಸ ನಡೆಸುತ್ತಿದ್ದ ಸಂದರ್ಭ ಬಲಮಧ್ಯ ಬೆರಳಿಗೆ ಗಾಯವಾದ ಕಾರಣ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಮುನ್ನಚ್ಚರಿಕಾ ಕ್ರಮವಾಗಿ ಎಕ್ಸ್‌ರೇಗೆ ಒಳಗಾಗಲಿದ್ದಾರೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ತಿಳಿಸಿದೆ.

ಮೊರ್ಗನ್ ತನ್ನ ಸಹ ಆಟಗಾರ ಅಗೆಯಸ್ ಬೌಲ್ ಜೊತೆ ಆಸ್ಟ್ರೇಲಿಯ ವಿರುದ್ಧ ಅಭ್ಯಾಸ ಪಂದ್ಯ ಪೂರ್ವ ತಯಾರಿಗೆ ಸೌಥಾಂಪ್ಟನ್‌ನಲ್ಲಿ ಕ್ಯಾಚ್ ಅಭ್ಯಾಸ ನಡೆಸುತ್ತಿದ್ದಾಗ ಬೆರಳಿಗೆ ಗಾಯವಾಗಿದೆ.

‘‘ಬೆಳಗ್ಗೆ ಫೀಲ್ಡಿಂಗ್ ಅಭ್ಯಾಸ ನಡೆಸುತ್ತಿದ್ದಾಗ ಮೊರ್ಗನ್ ಎಡ ಮಧ್ಯ ಬೆರಳಿಗೆ ಗಾಯವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಭ್ಯಾಸದ ಬಳಿಕ ಆಸ್ಪತ್ರೆಗೆ ತೆರಳಿದ್ದಾರೆ ಎಂದು ಇಸಿಬಿ ತಿಳಿಸಿದೆ.

32ರ ಹರೆಯದ ಮೊರ್ಗನ್ ಇತರ 14 ಆಟಗಾರರೊಂದಿಗೆ ಹ್ಯಾಂಪ್‌ಶೈರ್ ಮೈದಾನದಲ್ಲಿ ಅಭ್ಯಾಸ ನಡೆಸಿದ್ದಾರೆ.

ಇಂಗ್ಲೆಂಡ್ ತಂಡ ಮೊರ್ಗನ್ ನಾಯಕತ್ವದಲ್ಲಿ ಅಂತರ್‌ರಾಷ್ಟ್ರೀಯ ಏಕದಿನ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದೆ. ಬಲಿಷ್ಠ ಬ್ಯಾಟಿಂಗ್ ಸರದಿಯಲ್ಲಿ ಅವರು ಪ್ರಮುಖ ಆಟಗಾರನಾಗಿದ್ದಾರೆ. ಆತಿಥೇಯ ಇಂಗ್ಲೆಂಡ್ ತಂಡ ಮೇ 30 ರಂದು ದಕ್ಷಿಣ ಆಫ್ರಿಕವನ್ನು ಎದುರಿಸುವುದರೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News