ಬೆಂಗಳೂರು: ಸೋಲಾರ್ ಆಧಾರಿತ ಎಲೆಕ್ಟ್ರಿಕ್ ರಿಕ್ಷಾದಲ್ಲಿ ಪ್ರವಾಸಕ್ಕೆ ಚಾಲನೆ

Update: 2019-05-25 15:05 GMT

ಬೆಂಗಳೂರು, ಮೇ 25: ಸುಸ್ಥಿರ ಇಂಧನ, ಚಲನಶೀಲತೆ ಮತ್ತು ಶುದ್ಧಗಾಳಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗಿನ್ನಿಸ್ ದಾಖಲೆ ಗೈದಿರುವ ಮುಂಬೈನ ಐಐಟಿ ಹಳೆಯ ವಿದ್ಯಾರ್ಥಿ ಸುಶೀಲ್ ರೆಡ್ಡಿ 6 ಸಾವಿರ ಕಿ.ಮೀ ಸೋಲಾರ್ ಆಧಾರಿತ ಎಲೆಕ್ಟ್ರಿಕ್ ರಿಕ್ಷಾದಲ್ಲಿ ಕೈಗೊಳ್ಳಲಿರುವ ಪ್ರವಾಸಕ್ಕೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜ್ ಚಾಲನೆ ನೀಡಿದರು.

ಶನಿವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2017ರಲ್ಲಿ ಸರಕಾರ ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಳಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ನಗರದಲ್ಲಿ ಹೆಚ್ಚುತ್ತಿರುವ ವಾಯಮಾಲಿನ್ಯ, ಸಂಚಾರ ದಟ್ಟಣೆ ಕಡಿಮೆಗೊಳಿಸಲು ಹಾಗೂ ಸುಸ್ಥಿರ ಇಂಧನದ ವಾಹನಗಳನ್ನು ಚಲಾವಣೆಗೆ ಪ್ರಾಮುಖ್ಯತೆ ನೀಡುವ ಅಗತ್ಯವಿದೆ. ಆ ನಿಟ್ಟಿನಲ್ಲಿ ರಾಜ್ಯದ ಸಾರಿಗೆ ಇಲಾಖೆಯೂ ಕ್ರಮ ಕೈಗೊಳ್ಳುತ್ತಿದೆ. ಇಂದು ಚಾಲನೆ ನೀಡಿರುವ ಸೋಲಾರ್ ಅಳವಡಿಸಿರುವ ಆಟೊ ಮೂಲಕ ಸುಸ್ಥಿರ ಹಾಗೂ ನವೀಕರಿಸಬಹುದಾದ ಇಂಧನದ ಬಗ್ಗೆ ಪ್ರಚುರತೆ ನಡೆಸುತ್ತಿರುವುದು ಸ್ವಾಗತಾರ್ಹ. 6 ಸಾವಿರ ಕಿ.ಮೀ ಪ್ರಯಾಣ ಸುಖಕರವಾಗಲಿ ಎಂದು ಅವರು ಹಾರೈಸಿದರು.

ಸುಶೀಲ್ ರೆಡ್ಡಿ, ಪಲ್ಲ ಸಿದ್ಧಾಂತ, ಋತ್ವಿಕ್ ಆರ್ಯ ಮತ್ತು ಸುಧೀರ್ ಲೆಕ್ಕಾಲ ಅವರನ್ನು ಒಳಗೊಂಡಿರುವ ನಾಲ್ವರು ಸದಸ್ಯರ ತಂಡ ದೇಶದೆಲ್ಲಡೆ ಸಂಚರಿಸಲಿದ್ದು, ಮಾರ್ಗದುದ್ದಕ್ಕೂ ಮಾಲಿನ್ಯ ರಹಿತ ವಾಹನಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News