ವಿಶ್ವಕಪ್‌ನಲ್ಲಿ ಕೊಹ್ಲಿ, ಮೊರ್ಗನ್, ಫಿಂಚ್ ಪಾತ್ರ ಪ್ರಮುಖ

Update: 2019-05-25 18:32 GMT

ಮೆಲ್ಬೋರ್ನ್, ಮೇ 25: ಇಂಗ್ಲೆಂಡ್‌ನಲ್ಲಿ ಮೇ 30 ರಿಂದ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಮೂವರು ನಾಯಕರಾದ ವಿರಾಟ್ ಕೊಹ್ಲಿ, ಇಯಾನ್ ಮೊರ್ಗನ್ ಹಾಗೂ ಆ್ಯರೊನ್ ಫಿಂಚ್ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಕ್ರಿಕೆಟ್ ದಂತಕತೆ ಅಲನ್ ಬಾರ್ಡರ್ ಅಭಿಪ್ರಾಯಪಟ್ಟಿದ್ದಾರೆ.

1987ರಲ್ಲಿ ಆಸ್ಟ್ರೇಲಿಯ ತಂಡ ವಿಶ್ವಕಪ್ ಜಯಿಸಲು ನಾಯಕತ್ವವಹಿಸಿರುವ ಬಾರ್ಡರ್, ಆಕ್ರಮಣಕಾರಿ ಶೈಲಿಯ ನಾಯಕತ್ವದ ಮೂಲಕ ಕೊಹ್ಲಿ ಅವರು ಮೊರ್ಗನ್ ಹಾಗೂ ಫಿಂಚ್‌ಗಿಂತ ವಿಭಿನ್ನ ರೀತಿಯ ನಾಯಕನಾಗಿದ್ದಾರೆ ಎಂದರು.

ಮೂವರು ನಾಯಕರಿಗೆ ಯಾವುದೇ ಸ್ಥಾನ ನೀಡಲು ನಿರಾಕರಿಸಿದ 178 ಏಕದಿನಗಳಲ್ಲಿ ಆಸೀಸ್ ನಾಯಕತ್ವವಹಿಸಿದ್ದ ಬಾರ್ಡರ್, ಮೊರ್ಗನ್ ನಾಯಕತ್ವದಲ್ಲಿ ಇಂಗ್ಲೆಂಡ್ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿದೆ ಎಂದರು.

‘‘ಇಂಗ್ಲೆಂಡ್ ತಂಡ ಇದೀಗ ಉತ್ತಮ ಪ್ರದರ್ಶನ ನೀಡುತ್ತಿದೆ. ಆ ತಂಡ ವಿಭಿನ್ನ ರೀತಿಯ ಗೇಮ್ ಪ್ಲಾನ್ ಹೊಂದಿದ್ದು, ಅದನ್ನು ವಿಶ್ವಕಪ್‌ನಲ್ಲಿ ನೋಡಲು ಆಸಕ್ತಿಕರವಾಗಿದೆ’’ ಎಂದಿರುವ 68ರ ಹರೆಯದ ಮಾಜಿ ಎಡಗೈ ದಾಂಡಿಗ ಬಾರ್ಡರ್ ತಮ್ಮದೇ ದೇಶದ ಫಿಂಚ್ ಅವರ ಕಠಿಣ ಪರಿಸ್ಥಿತಿಯಲ್ಲಿ ತೋರುವ ನಾಯಕತ್ವದ ಗುಣದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News