ಬ್ರೆಝಿಲ್ ಫುಟ್ಬಾಲ್ ನ ಮಾಜಿ ಮುಖ್ಯಸ್ಥ ವಿರುದ್ದ ನಿಷೇಧ ಎತ್ತಿಹಿಡಿದ ಫಿಫಾ

Update: 2019-05-29 06:43 GMT

ಲಾಸನ್ನೆ, ಮೇ 28: ಲಂಚ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ಬ್ರೆಝಿಲ್ ಫುಟ್ಬಾಲ್ ಒಕ್ಕೂಟದ ಮಾಜಿ ಮುಖ್ಯಸ್ಥ ಮಾರ್ಕೊ ಪೊಲೊ ಡೆಲ್ ನೆರೊಗೆ ವಿಧಿಸಲಾಗಿರುವ ಆಜೀವ ನಿಷೇಧವನ್ನು ಫಿಫಾ ಮೇಲ್ಮನವಿ ಸಮಿತಿ ಸೋಮವಾರ ಎತ್ತಿ ಹಿಡಿದಿದೆ.

ಕಳೆದ ವರ್ಷದ ಎಪ್ರಿಲ್‌ನಲ್ಲಿ ಫಿಫಾ ಶಿಸ್ತು ಸಮಿತಿಯು 78ರ ಹರೆಯದ ಡೆಲ್ ನೆರೊರನ್ನು ಫುಟ್ಬಾಲ್ ಸಂಬಂಧಿ ಚಟುವಟಿಕೆಗಳಿಂದ ವಜಾಗೊಳಿಸಿದ್ದಲ್ಲದೆ, ಒಂದು ಮಿಲಿಯನ್ ಸ್ವಿಸ್ ಫ್ರಾಂಕ್ಸ್(1 ಮಿಲಿಯನ್ ಡಾಲರ್)ದಂಡ ವಿಧಿಸಿತ್ತು.

ಕೋಪಾ ಅಮೆರಿಕ ಸೇರಿದಂತೆ ಪ್ರಮುಖ ಟೂರ್ನಮೆಂಟ್‌ಗಳ ಪ್ರಸಾರ ಗುತ್ತಿಗೆ ನೀಡುವುದಕ್ಕೆ ಪ್ರತಿಯಾಗಿ ಡೆಲ್ ನೆರೊ ಲಂಚ ಸ್ವೀಕರಿಸಿದ್ದು ವರ್ಷಪೂರ್ತಿ ನಡೆದ ತನಿಖೆಯ ವೇಳೆ ಬಹಿರಂಗವಾಗಿತ್ತು. 2015ರಲ್ಲಿ ಜೋಸ್ ಮರಿಯಾ ಮರಿನ್ ಉತ್ತರಾಧಿಕಾರಿಯಾಗಿ ಬ್ರೆಝಿಲ್ ಫುಟ್ಬಾಲ್ ಫೆಡರೇಶನ್‌ನಲ್ಲಿ ನೆರೊ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News