ನಟ ಅಂಬರೀಶ್ ಹುಟ್ಟುಹಬ್ಬ: ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಮರಣೆ

Update: 2019-05-29 15:18 GMT

ಬೆಂಗಳೂರು, ಮೇ 29: ಕೇಂದ್ರದ ಮಾಜಿ ಸಚಿವ ಹಾಗೂ ಚಿತ್ರನಟ ರೆಬಲ್‌ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡಿ ಅವರನ್ನು ಸ್ಮರಿಸಿದ್ದಾರೆ.

‘ಅಂಬರೀಷ್ ಹಾಗೂ ನನ್ನ ಸ್ನೇಹ ಮರೆಯಲಾಗದಂತಹದ್ದು. ಸದಾ ಜನರ ಜೊತೆ ಬೆರೆತ, ಸಮುದಾಯದ ಏಳಿಗೆಯ ಬಗ್ಗೆ ಚಿಂತಿಸಿದ ಗೆಳೆಯನ ಜನ್ಮ ದಿನ ಇಂದು. ಅಂಬರೀಷ್ ಅವರ ಉದಾತ್ತ ಮನಸ್ಸು ಎಲ್ಲರಿಗೂ ದಕ್ಕಲಿ ಎಂದು ಹಾರೈಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News