×
Ad

ಇಸ್ರೇಲ್‌ನಿಂದ ಜೆರುಸಲೇಂ ಮುಕ್ತಿಗೆ ಮುಸ್ಲಿಂ ಒಕ್ಕೂಟ ಆಗ್ರಹ

Update: 2019-05-29 22:25 IST

ಬೆಂಗಳೂರು, ಮೇ 29: ಇಸ್ರೇಲ್ ಕಪಿಮುಷ್ಟಿಯಿಂದ ಮುಸಲ್ಮಾನರ 3ನೇ ಪವಿತ್ರ ಸ್ಥಳವಾದ ಜೆರುಸಲೇಂ ನಗರವನ್ನು ಮುಕ್ತಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಮುಸ್ಲಿಂ ಒಕ್ಕೂಟವು ಮೇ 31ರಂದು ಪುರಭವನದ ಮುಂಭಾಗದಲ್ಲಿ ಧರಣಿ ಹಮ್ಮಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಕಾರ್ಯದರ್ಶಿ ಕುತುಬ್ದೀನ ನಾಯಕವಾಡಿ, ಜೆರುಸಲೇನ ಪ್ಯಾಲಸ್ತೀನ್ ನ ಪ್ರಮುಖ ನಗರ. 1967 ರಲ್ಲಿ ಇಸ್ರೇಲ್‌ನವರು ಜೆರುಸಲೇಂ ನಗರವನ್ನು ಬಲವಂತವಾಗಿ ಆಕ್ರಮಿಸಿಕೊಂಡಿದ್ದಾರೆ. ಅಂದಿನಿಂದ ಇಲ್ಲಿಯ ತನಕ ಜೆರುಸಲೇಂ ಇಸ್ರೇಲ್‌ನ ವಶದಲ್ಲಿದೆ. ಇದು ಮುಸಲ್ಮಾನರ ಭಾವನೆಗಳಿಗೆ ಚ್ಯುತಿ ತಂದಿದೆ. ಇಸ್ರೇಲ್‌ನ ದಬ್ಬಾಳಿಕೆಯಿಂದ ಜೆರುಸಲೇಂ ನಗರವನ್ನು ಸ್ವತಂತ್ರಗೊಳಿಸುವುದೇ ನಮ್ಮ ಪ್ರತಿಭಟನೆಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಮುಸ್ಲಿಂರ ಪವಿತ್ರ ನಗರವಾಗಿರುವ ಮಕ್ಕಾ, ಮದೀನಾ ಹೊರತುಪಡಿಸಿದರೆ ಜೆರುಸಲೇಂ ನಗರ ಪವಿತ್ರವಾದ ಸ್ಥಳ. ಈ ನಗರವನ್ನು ಇಸ್ರೇಲ್ ಕಪಿಮುಷ್ಟಿಯಿಂದ ಮುಕ್ತಗೊಳಿಸಲು ರಾಷ್ಟ್ರೀಯ ಜೆರುಸಲೇಂ ದಿನವನ್ನಾಗಿ ಪ್ರತಿವರ್ಷ ಮೇ 31ರಂದು ಆಚರಿಸಲಾಗುತ್ತದೆ. ಅಮೆರಿಕಾ ಮತ್ತು ಇಸ್ರೇಲ್ ಕುಮ್ಮಕ್ಕಿನಿಂದ ಜೆರುಸಲೇಂ ನಗರ ಇನ್ನೂ ಸ್ವತಂತ್ರವಾಗದೇ ಇರುವುದು ದುರ್ದೈವ. ಹಾಗಾಗಿ ಮೇ 31 ರಂದು ವಿಶ್ವದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News