ಶೂಟಿಂಗ್: ಮನು ಭಾಕರ್‌ಗೆ ಒಲಿಂಪಿಕ್ಸ್‌ನಲ್ಲಿ ಸ್ಥಾನ

Update: 2019-05-29 19:12 GMT

ಮ್ಯೂನಿಚ್, ಮೇ 29: ಯುವ ಶೂಟರ್ ಮನು ಭಾಕರ್ ಐಎಸ್‌ಎಸ್‌ಎಫ್ ವರ್ಲ್ಡ್ ಕಪ್‌ನ ವನಿತೆಯರ 10 ಮೀಟರ್ ಏರ್ ಪಿಸ್ತೂಲ್ ಇವೆಂಟ್‌ನಲ್ಲಿ ನಾಲ್ಕನೇ ಸ್ಥಾನ ಗಿಟ್ಟಿಸಿಕೊಳ್ಳುವುದರೊಂದಿಗೆ ಒಲಿಂಪಿಕ್ಸ್‌ಗೆ ತೆರಳುವ ಅರ್ಹತೆ ಪಡೆದಿದ್ದಾರೆ. 17ರ ಹರೆಯದ ಭಾಕರ್ ಫೈನಲ್‌ನಲ್ಲಿ 201.0 ಪಾಯಿಂಟ್ ದಾಖಲಿಸಿ 2022ರ ಟೋಕಿಯೊ ಒಲಿಂಪಿಕ್ಸ್‌ಗೆ ಅವಕಾಶ ಪಡೆದಿದ್ದಾರೆ. ಭಾರತದ 7ನೇ ಒಲಿಂಪಿಕ್ಸ್ ಕೋಟಾ ತುಂಬಿದರು. 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸೌರಭ್ ಚೌಧರಿ ,ಅಭಿಷೇಕ್ ವರ್ಮಾ ಹೀನಾ ಸಿಧು ಈ ಮೊದಲು ಒಲಿಂಪಿಕ್ಸ್ ನಲ್ಲಿ ಅವಕಾಶ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News