ಭಾರತ ‘ಎ’ ಕ್ರಿಕೆಟಿಗ 3 ತಿಂಗಳು ಅಮಾನತು

Update: 2019-05-30 18:32 GMT

ಹೊಸದಿಲ್ಲಿ, ಮೇ 30: ಅಬುಧಾಬಿಯಲ್ಲಿ ಅನಧಿಕೃತ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ್ದ ಭಾರತ ‘ಎ’ ಹಾಗೂ ಉತ್ತರ ಪ್ರದೇಶದ ಕ್ರಿಕೆಟಿಗ ರಿಂಕು ಸಿಂಗ್‌ರನ್ನು ಬಿಸಿಸಿಐ ಗುರುವಾರ ಮೂರು ತಿಂಗಳ ಕಾಲ ಅಮಾನತುಗೊಳಿಸಿದೆ. ಸಿಂಗ್ ಬಿಸಿಸಿಐ ಅನುಮತಿ ಪಡೆಯದೇ ಟಿ-20 ಲೀಗ್‌ನಲ್ಲಿ ಭಾಗವಹಿಸಿ ಬಿಸಿಸಿಐ ನಿಯಮಾವಳಿಯನ್ನು ಉಲ್ಲಂಘಿಸಿದ್ದರು.

ಬಿಸಿಸಿಐ ನಿಯಮದ ಪ್ರಕಾರ ಕ್ರಿಕೆಟ್ ಮಂಡಳಿಯೊಂದಿಗೆ ನೋಂದಾಯಿತ ಆಟಗಾರ ಅನುಮತಿಯಿಲ್ಲದೆ ವಿದೇಶದಲ್ಲಿ ಟೂರ್ನಮೆಂಟ್‌ಗಳನ್ನು ಆಡುವಂತಿಲ್ಲ. ನಿಯಮ ಉಲ್ಲಂಘಿಸಿರುವ ರಿಂಕು ಸಿಂಗ್‌ಗೆ ಮೂರು ತಿಂಗಳ ಅಮಾನತು ಅವಧಿಯು 2019ರ ಜೂ.1ರಿಂದ ಆರಂಭವಾಗಲಿದೆ.

ಅಮಾನತುಗೊಂಡಿರುವ ಸಿಂಗ್ ಮೇ 31ರಿಂದ ಆರಂಭವಾಗಲಿರುವ ಶ್ರೀಲಂಕಾ ‘ಎ’ ತಂಡದ ವಿರುದ್ಧ ಭಾರತ ‘ಎ’ ತಂಡದಲ್ಲಿ ಆಡುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News