ಅತೃಪ್ತ ಉದ್ಯೋಗಿಯ ಸಿಟ್ಟಿಗೆ 11 ಮಂದಿ ಬಲಿ

Update: 2019-06-01 03:25 GMT

ವಾಷಿಂಗ್ಟನ್, ಜೂ.1: ಅತೃಪ್ತ ಸಾರ್ವಜನಿಕ ಸೇವಕನೊಬ್ಬ ಸಹೋದ್ಯೋಗಿಗಳ ಮೇಲೆ ಬೇಕಾಬಿಟ್ಟಿ ಗುಂಡು ಹಾರಿಸಿದ ಪರಿಣಾಮ 11 ಮಂದಿ ಮೃತಪಟ್ಟು ಇತರ ಆರು ಮಂದಿ ಗಾಯಗೊಂಡಿರುವ ಘಟನೆ ವರ್ಜೀನಿಯಾ ಬೀಚ್‌ನಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಈ ಕರಾವಳಿ ರೆಸಾರ್ಟ್ ನಗರದಲ್ಲಿ ನಡೆದ ಈ ಸಾಮೂಹಿಕ ಶೂಟಿಂಗ್‌ನಲ್ಲಿ ದಿಢೀರನೇ ಮುನ್ಸಿಪಲ್ ಕಟ್ಟಡಕ್ಕೆ ನುಗ್ಗಿದ ಆರೋಪಿ ಸಂಜೆ 4ರ ಸುಮಾರಿಗೆ ಬೇಕಾಬಿಟ್ಟಿ ಗುಂಡು ಹಾರಿಸಿದ್ದಾಗಿ ವರ್ಜೀನಿಯಾ ಬೀಚ್ ಪೊಲೀಸ್ ಮುಖ್ಯಸ್ಥ ಜೇಮ್ಸ್ ಕ್ರೆವೇರಾ ಹೇಳಿದ್ದಾರೆ.

ಶಂಕಿತ ಪೊಲೀಸ್ ಅಧಿಕಾರಿಯತ್ತ ಗುಂಡು ಹಾರಿಸಿದ್ದು, ಪ್ರತಿಯಾಗಿ ಅಧಿಕಾರಿ ನಡೆಸಿದ ಗುಂಡಿನ ದಾಳಿಗೆ ಹಂತಕ ಬಲಿಯಾಗಿದ್ದಾನೆ. ಘಟನೆಯಲ್ಲಿ ತೀವ್ರ ಗಾಯಗೊಂಡು ಬದುಕಿ ಉಳಿದಿರುವ ಆರು ಮಂದಿಯ ಪೈಕಿ ಈ ಅಧಿಕಾರಿ ಕೂಡಾ ಸೇರಿದ್ದು, ಗುಂಡುನಿರೋಧಕ ಜಾಕೆಟ್ ಹೊಂದಿದ್ದ ಹಿನ್ನೆಲೆಯಲ್ಲಿ ಅಧಿಕಾರಿ ಬದುಕಿ ಉಳಿದಿದ್ದಾರೆ ಎಂದು ಕ್ರೆವೇರಾ ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಲ್ಲಿ ಉದ್ಯೋಗ ಸ್ಥಳದಲ್ಲಿ ನಡೆದ ಭೀಕರ ದಾಳಿ ಇದಾಗಿದೆ. ಕಳೆದ ಫೆಬ್ರವರಿಯಲ್ಲಿ ಫ್ಯಾಕ್ಟರಿ ಕಾರ್ಮಿಕನೊಬ್ಬ ಐದು ಮಂದಿ ಸಹೋದ್ಯೋಗಿಗಳನ್ನು ಹತ್ಯೆ ಮಾಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News