ಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ

Update: 2019-06-01 16:46 GMT

ಬೆಂಗಳೂರು, ಜೂ.1: ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಜನರಿಂದ ಹಣ ಕಟ್ಟಿಸಿಕೊಂಡು ನಂತರ ಪರಾರಿಯಾಗುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಆರ್‌ಟಿ ನಗರದ ಎಜಿಐಎಂ ಎಂಬ ಹೆಸರಿನ ಕಂಪೆನಿಯೊಂದು 1 ಲಕ್ಷ ರೂ. ಹೂಡಿಕೆ ಮಾಡಿದರೆ ಹದಿನೈದು ದಿನದಲ್ಲಿ 2 ಲಕ್ಷ ರೂ.ನೀಡುವುದಾಗಿ ಆಮಿಷವೊಡ್ಡಿದ್ದು, ಪುರುಷೋತ್ತಮ್ ಎಂಬುವವರು 9 ಲಕ್ಷ ಹಣ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಗೆಳೆಯರನ್ನು ಸೇರಿಸಿದರೆ ಶೇ.5ರಷ್ಟು ಹೆಚ್ಚುವರಿ ಹಣ ನೀಡುವುದಾಗಿಯೂ ಆಮಿಷ ಒಡ್ಡಲಾಗಿದೆ. ಅದರಂತೆ ತನ್ನ ಗೆಳೆಯರಿಗೆ ಹಣ ಹೂಡಿಕೆ ಮಾಡುವಂತೆ ಪುರುಷೋತ್ತಮ್ ಸೂಚಿಸಿದ್ದರು. ತದನಂತರ ನೂರಾರು ಮಂದಿ ಈ ಬೋಗಸ್ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದ್ದರು ಎನ್ನಲಾಗಿದೆ.

ಹಣ ಪಡೆದ ಬಳಿಕ ನೀಡದೆ ಸತಾಯಿಸಿದ್ದಾರೆ. ಇದರಿಂದ ಕಂಗಾಲಾದ ಗ್ರಾಹಕರು ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು, ತನಿಖೆ ನಡೆಸಿ ಎಜಿಐಎಂನ ಚಂದೇಶ್ ಹಾಗೂ ಆತನ ತಂದೆಯನ್ನು ವಶಕ್ಕೆ ಪಡೆದು, ಪ್ರಮುಖ ಆರೋಪಿ ಪ್ರವೀಣ್ ಪತ್ತೆಗೆ ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News