×
Ad

ಕಾರುಗಳ ಕಳವು ಪ್ರಕರಣ: ನಾಲ್ವರು ಆರೋಪಿಗಳ ಬಂಧನ

Update: 2019-06-02 20:07 IST

ಬೆಂಗಳೂರು, ಜೂ.2: ಕಾರುಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡಿ, ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪದಡಿ ನಾಲ್ವರನ್ನು ಬಂಧಿಸುವಲ್ಲಿ ಕೆ.ಪಿ ಅಗ್ರಹಾರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ನಿವಾಸಿಗಳಾದ ಶಶಿಕುಮಾರ್, ಪ್ರಕಾಶ್, ಪ್ರಶಾಂತ್ ಹಾಗೂ ಮೋಹನ್ ಕುಮಾರ್ ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ರಾತ್ರಿವೇಳೆ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಗಳನ್ನ ಅಡ್ಡಗಟ್ಟುತ್ತಿದ್ದರು. ಬಳಿಕ ಅವರನ್ನು ಸುಲಿಗೆ ಮಾಡಿ, ಕಾರನ್ನು ಪಡೆದು, ಅನುಮಾನ ಬಾರದ ರೀತಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಈ ಕುರಿತು ಕಾರು ಕಳೆದುಕೊಂಡವರು ಕೆ.ಪಿ ಅಗ್ರಹಾರ ಠಾಣೆಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಸುಲಿಗೆ ಮಾಡಿದ 4 ಕಾರು ಮತ್ತು 100 ಗ್ರಾಂ. ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News