×
Ad

ಚೀಟಿ ವ್ಯವಹಾರದಲ್ಲಿ ನಷ್ಟ: ಮನನೊಂದು ತಾಯಿ-ಮಗ ಆತ್ಮಹತ್ಯೆ

Update: 2019-06-02 20:11 IST

ಬೆಂಗಳೂರು, ಜೂ.2: ಚೀಟಿ ವ್ಯವಹಾರದಲ್ಲಿ ಉಂಟಾದ ನಷ್ಟದಿಂದ ನೊಂದ ಮಹಿಳೆಯೊಬ್ಬರು 12 ವರ್ಷದ ಮಗನೊಂದಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಇಲ್ಲಿನ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭೂತಿಪುರದ ಎಸ್‌ಎಲ್‌ಎನ್ ಸ್ಕೂಲ್ ಬಳಿಯ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದ ಸುರೇಶ್ ಬಾಬು ಅವರ ಪತ್ನಿ ಗೀತಾಬಾಯಿ (45) ಹಾಗೂ ಅವರ ಪುತ್ರ ವರುಣ್ ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ.

ಚಿಲ್ಲರೆ ಅಂಗಡಿ ನಡೆಸುತ್ತಿದ್ದ ಗೀತಾಬಾಯಿ, ಅದರ ಜತೆ ಚೀಟಿ ವ್ಯವಹಾರ ಕೂಡ ನಡೆಸುತ್ತಿದ್ದು, ವ್ಯವಹಾರದಲ್ಲಿ ಸಾಕಷ್ಟು ನಷ್ಟ ಅನುಭಸಿದ್ದರು. ಚೀಟಿ ಹಾಕಿದವರು ಹಣಕ್ಕಾಗಿ ಒತ್ತಡ ತರುತ್ತಿದ್ದರಿಂದ ನೊಂದಿದ್ದ ಆಕೆ, ರಾತ್ರಿ 12ರ ವೇಳೆ ಮಗನ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮನೆಯಲ್ಲಿ ತಾಯಿ ಗೀತಾಬಾಯಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದರೆ, ಮಗ ಮತ್ತೊಂದೆಡೆಯಿದ್ದ ಫ್ಯಾನಿನ ಹುಕ್ಕಿಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದು, ತಾಯಿಯೇ ಮಗನಿಗೆ ನೇಣು ಬಿಗಿದು ಕೊಲೆ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ಇದ್ದು, ಮರಣೋತ್ತರ ಪರೀಕ್ಷೆಯ ನಂತರ ಸತ್ಯಾಂಶ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News