×
Ad

ಜೂ.20 ವರೆಗೂ ರಿಯಾಯಿತಿ ಪಾಸ್ ವಿಸ್ತರಣೆ

Update: 2019-06-02 22:00 IST

ಬೆಂಗಳೂರು, ಜೂ.2: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿದ್ದು, 2018-19ನೆ ಸಾಲಿನಲ್ಲಿ ವಿತರಿಸಲಾಗಿದ್ದ ಸ್ಮಾರ್ಟ್ ಕಾರ್ಡ್ ಮಾದರಿಯ ರಿಯಾಯಿತಿ ಪಾಸ್‌ಗಳನ್ನು ಶಾಲಾ ಗುರುತಿನ ಚೀಟಿ ಹಾಜರುಪಡಿಸಿ ಜೂ.20 ರವರೆಗೂ ಪ್ರಯಾಣಿಸಲು ಬಿಎಂಟಿಸಿ ಅನುಮತಿ ನೀಡಿದೆ.

ಈಗಾಗಲೇ ಪ್ರಸಕ್ತ ಸಾಲಿನ ಶಾಲಾ-ಕಾಲೇಜುಗಳು ಆರಂಭವಾಗಿದೆ. ಹೀಗಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ರಿಯಾಯಿತಿ ಪಾಸ್ ವಿತರಣೆ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಬಿಎಂಟಿಸಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News