ಫೀಸ್ ಕಟ್ಟದ ವಿದ್ಯಾರ್ಥಿ, ತಾಯಿಗೆ ಲೈಂಗಿಕ ಕಿರುಕುಳ: ಆರೋಪ

Update: 2019-06-03 16:58 GMT

ಬೆಂಗಳೂರು, ಜೂ.3: ವಿದ್ಯಾರ್ಥಿಯೊಬ್ಬ ಖಾಸಗಿ ಶಾಲೆಯಲ್ಲಿ ಪ್ರವೇಶ ಶುಲ್ಕ(ಫೀಸ್) ಪಾವತಿ ಮಾಡದ ಹಿನ್ನೆಲೆ, ಆತನ ತಾಯಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆಯೊಂದು ಇಲ್ಲಿನ ಕೆಜಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ನಗರದ ಗೋವಿಂದಪುರದ ಶಾಲೆಯ ಸ್ಯಾಮ್ ಮತ್ತು ರೂತ್ ಸೆಲ್ವರಾಜ್ ಎಂಬುವರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ.

ಏನಿದು ಪ್ರಕರಣ?: ತಾಹಸೀನ್ ಖಾನಂ ಎಂಬವರ ಪುತ್ರ ಇಮ್ಯೂನಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಜೂನ್‌ನಿಂದ ಎಂಟನೇ ತರಗತಿಗೆ ಹಾಜರಾತಿಗಾಗಿ ಹೋಗಿದ್ದ. ಈ ವೇಳೆ, ಶುಲ್ಕ ಕಡಿಮೆ ಇದೆ, ಮಗನ ಶಾಲೆ ಪ್ರವೇಶಕ್ಕೆ ಅವಕಾಶ ನೀಡಿ ಎಂದು ಕೋರಿದ್ದಾರೆ. ಆದರೆ, ಇಮ್ಯೂನಲ್ ಶಾಲೆಯ ಪ್ರಾಂಶುಪಾಲೆ ಹಾಗೂ ಆತನ ಪುತ್ರರಾದ ಸ್ಯಾಮ್ ಮತ್ತು ರೂತ್ ಸೆಲ್ವರಾಜ್ ಎಂಬುವರು ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಕೆಜಿ ಹಳ್ಳಿ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News