ಕೆಎಸ್ಸಾರ್ಟಿಸಿ: ಪ್ರಯಾಣಿಕರ ನೆರವಿಗೆ ‘ಚಾಟ್ಬೊಟ್ ಸಹಾಯವಾಣಿ’

Update: 2019-06-03 17:21 GMT

ಬೆಂಗಳೂರು, ಜೂ. 3: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಬಸ್‌ಗಳಲ್ಲಿ ಪ್ರಯಾಣಿಸಲು ಸಾರ್ವಜನಿಕರ ಮುಂಗಡ ಟಿಕೆಟ್ ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ ‘ಚಾಟ್ಬೊಟ್ ಸಹಾಯವಾಣಿ’ಯನ್ನು ಸಂಸ್ಥೆ ನೂತನವಾಗಿ ಆರಂಭಿಸಿದೆ.

ಚಾಟ್ಬೊಟ್ ಸಹಾಯವಾಣಿ ಕೃತಕ ಬುದ್ಧಿಮತ್ತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಬೆಂಗಳೂರು ಮೂಲದ ಆರಂಭಿಕ ಪ್ರಶಸ್ತಿ ವಿಜೇತ ಕೋರೋವರ್‌ಸನಿಂದ ವಿನ್ಯಾಸ ಹಾಗೂ ಅಭಿವೃದ್ಧಿಪಡಿಸಲಾಗಿದೆ. ಚಾಟ್ಬೊಟ್ ಕೃತಕ ಬುದ್ಧಿಮತ್ತೆಯಿಂದ ಜನರಿಗೆ ನೆರವಾಗಲಿದೆ ಎಂದು ತಿಳಿಸಲಾಗಿದೆ.

ಚಾಟ್ಬೊಟ್ ಸಹಾಯವಾಣಿಯು ಮುಂಗಡ ಬುಕ್ಕಿಂಗ್, ವಿಚಾರಣೆ ಮತ್ತು ನಿಗಮದ ಸೇವೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡಲಿದೆ. ಸಹಾಯವಾಣಿ ದಿನದ ಇಪ್ಪತ್ನಾಲ್ಕು ಗಂಟೆ ಕಾರ್ಯ ನಿರ್ವಹಿಸಲಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News