ಈ ಪ್ರಸಿದ್ಧ ದೇವಸ್ಥಾನದಲ್ಲಿದೆ 276 ಕೆಜಿ ಚಿನ್ನ, 130 ಕೋಟಿ ರೂ.!

Update: 2019-06-06 17:45 GMT
ಸಾಂದರ್ಭಿಕ ಚಿತ್ರ

ಕಠ್ಮಂಡು (ನೇಪಾಳ), ಜೂ. 6: ನೇಪಾಳದ ರಾಜಧಾನಿ ಕಠ್ಮಂಡುವಿನ ಪ್ರಸಿದ್ಧ ಪಶುಪತಿನಾಥ ದೇವಸ್ಥಾನವು 276 ಕೆಜಿ ಚಿನ್ನ ಮತ್ತು 130 ಕೋಟಿ ರೂಪಾಯಿ ನಗದು ಹೊಂದಿದೆ ಎಂದು ವರದಿಯೊಂದು ತಿಳಿಸಿದೆ.

ದೇವಸ್ಥಾನದ ಆಸ್ತಿ ಮತ್ತು ಸಂಪತ್ತನ್ನು ಪತ್ತೆಹಚ್ಚಲು ನೇಪಾಳ ಸರಕಾರ ನೇಮಿಸಿರುವ ಸಮತಿಯೊಂದು ಬುಧವಾರ ಈ ವಿಷಯವನ್ನು ಬಹಿರಂಗಪಡಿಸಿದೆ.

ದೇವಸ್ಥಾನ ಹೊಂದಿರುವ ಸಂಪತ್ತನ್ನು ಲೆಕ್ಕಮಾಡಲು ಸ್ಥಾಪಿಸಲಾಗಿರುವ ಸಮಿತಿಯೊಂದು ಅಂಕಿಅಂಶಗಳನ್ನು ಬಹಿರಂಗಪಡಿಸುತ್ತಿರುವುದು ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ.

10 ತಿಂಗಳ ಅವಧಿಯ ಅಂಕಿಅಂಶಗಳ ಆಧಾರದಲ್ಲಿ ಸಮಿತಿಯು ಅಧ್ಯಯನ ಮತ್ತು ಸಮೀಕ್ಷೆಯನ್ನು ನಡೆಸಿದೆ.

ಪಶುಪತಿ ಪ್ರದೇಶ ಅಭಿವೃದ್ಧಿ ಟ್ರಸ್ಟ್ (ಪಿಎಡಿಟಿ)ನ ಹಣಕಾಸು ಇಲಾಖೆಯಿಂದ ಪಡೆದ ದಾಖಲೆಗಳನ್ನು ವಿಶ್ಲೇಷಿಸಿದ ಬಳಿಕ, ಒಟ್ಟು 130 ಕೋಟಿ ರೂಪಾಯಿ ಮೊತ್ತವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾಗಿದೆ ಎಂಬುದನ್ನು ಸಮಿತಿ ಪತ್ತೆಹಚ್ಚಿದೆ.

ಐದನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯವು ಏಶ್ಯದ ಅತ್ಯಂತ ಮಹತ್ವದ ನಾಲ್ಕು ಶಿವ ಮಂದಿರಗಳ ಪೈಕಿ ಒಂದಾಗಿದೆ.

ದೇವಸ್ಥಾನವು 994.14 ಹೆಕ್ಟೇರ್ ಜಮೀನನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News