ವ್ಹೀಲಿಂಗ್: ಅಪ್ರಾಪ್ತ ಬಾಲಕ ಸೇರಿ ಇಬ್ಬರು ಸೆರೆ

Update: 2019-06-07 16:11 GMT

ಬೆಂಗಳೂರು, ಜೂ.7: ರಸ್ತೆ ನಿಯಮ ಉಲ್ಲಂಘಿಸಿ, ಬೈಕ್‌ನಲ್ಲಿ ವ್ಹೀಲಿಂಗ್ ನಡೆಸುತ್ತಿದ್ದ ಆರೋಪದಡಿ ಅಪ್ರಾಪ್ತ ಬಾಲಕ ಸೇರಿ, ಇಬ್ಬರನ್ನು ಯಲಹಂಕ ಸಂಚಾರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆರ್‌ಟಿ ನಗರದ ಸಾಹಿಲ್ ರಹಮಾನ್(19)ನನ್ನು ಬಂಧಿಸಿ, ಮತ್ತೊಬ್ಬ ಅಪ್ರಾಪ್ತ ಬಾಲಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂ.2 ರಂದು ಮುಂಜಾನೆ ಹೆಬ್ಬಾಳ ಮೇಲ್ಸುತುವೆ ರಸ್ತೆಯಿಂದ ಯಲಹಂಕದವರೆಗೆ ಈ ಇಬ್ಬರೂ ಅಪಾಯಕಾರಿ ವ್ಹೀಲಿಂಗ್ ಮಾಡಿಕೊಂಡು ಹೋಗುತ್ತಿದ್ದರು. ಹಿಂದೆ ಸಾಗುತ್ತಿದ್ದ ಬೈಕ್ ಸವಾರರೊಬ್ಬರು ಅದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಯಲಹಂಕ ಸಂಚಾರ ಪೊಲೀಸರಿಗೆ ರವಾನಿಸಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿ ದೃಶ್ಯದಲ್ಲಿನ ಬೈಕ್ ಸಂಖ್ಯೆಯನ್ನು ಆಧರಿಸಿ ಇವರಿಬ್ಬರನ್ನು ಬಂಧಿಸಿ, ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News