×
Ad

ಬೆಂಗಳೂರು: ಎರಡು ಕಡೆ ಬೆಂಕಿ ಅವಘಡ; ಅಪಾರ ನಷ್ಟ

Update: 2019-06-07 21:59 IST

ಬೆಂಗಳೂರು, ಜೂ.7: ನಗರದ ಎರಡು ಕಡೆ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳಿಗೆ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ.

ಇಲ್ಲಿನ ದೊಮ್ಮಲೂರಿನ ಎರಡನೆ ಹಂತದ ಸರ್ವೀಸ್ ರಸ್ತೆಯ ಜೂಮ್ ಕಾರು ಕಚೇರಿಯ ನೆಲಮಹಡಿಯಲ್ಲಿ ಶೇಖರಿಸಿದ್ದ ಹಳೆ ಬ್ಯಾಟರಿಗಳಿಗೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ.

ನೂರಾರು ಬ್ಯಾಟರಿಗಳನ್ನು ನೆಲಮಹಡಿಯಲ್ಲಿ ಶೇಖರಿಸಿದ್ದು, ಗುರುವಾರ ರಾತ್ರಿ 11ರ ವೇಳೆ ಬೆಂಕಿ ತಗುಲಿ ಬ್ಯಾಟರಿಗಳೆಲ್ಲಾ ಸುಟ್ಟುಹೋಗಿವೆ. ಸುದ್ದಿ ತಿಳಿದ ತಕ್ಷಣ ಎರಡು ಅಗ್ನಿಶಾಮಕ ವಾಹನಗಳು ಧಾವಿಸಿ ಬೆಂಕಿ ನಂದಿಸಿವೆ. ನೆಲಮಹಡಿಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಸಂಬಂಧ ಹಲಸೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಾರಿಗೆ ಬೆಂಕಿ: ಮನೆ ಮುಂದೆ ನಿಲ್ಲಿಸಿದ್ದ ಕಾರು ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಹೋಗಿರುವ ಘಟನೆ ಹನುಮಂತನಗರದ 10ನೇ ಮುಖ್ಯರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಸುರೇಶ್ ಎಂಬುವವರು ರಾತ್ರಿ 10ರ ವೇಳೆ ಮನೆಯ ಮುಂದೆ ಕಾರು ನಿಲ್ಲಿಸಿದ್ದು, ಮಧ್ಯರಾತ್ರಿ ಬೆಂಕಿ ತಗುಲಿದೆ. ಸ್ಥಳೀಯರೇ ಬೆಂಕಿ ನಂದಿಸಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿದೆ ಎಂದು ಹನುಮಂತನಗರ ಠಾಣಾ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News