ಮಾಲ್ಡೀವ್ಸ್ ಅಧ್ಯಕ್ಷರಿಗೆ ಕ್ರಿಕೆಟ್ ಬ್ಯಾಟ್ ಉಡುಗೊರೆ ನೀಡಿದ ಪ್ರಧಾನಿ ಮೋದಿ

Update: 2019-06-08 18:58 GMT

ಮಾಲೆ, ಜೂ.8: ಮಾಲ್ಡೀವ್ಸ್‌ಗೆ ಶನಿವಾರ ಭೇಟಿ ನೀಡಿರುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಆ ದೇಶದ ಅಧ್ಯಕ್ಷ ಇಬ್ರಾಹಿಂ ಮುಹಮ್ಮದ್ ಸೊಲೈಹ್‌ಗೆ ಟೀಮ್ ಇಂಡಿಯಾ ಆಟಗಾರರ ಸಹಿ ಇರುವ ಬ್ಯಾಟನ್ನು ಉಡುಗೊರೆಯಾಗಿ ನೀಡಿದರು.

ಮಾಲ್ಡೀವ್ಸ್‌ನೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಮೋದಿ ಕ್ರಿಕೆಟ್ ಬ್ಯಾಟ್‌ನ್ನು ಉಡುಗೊರೆಯಾಗಿ ನೀಡಿದರು.

‘‘ಮಾಲ್ಡೀವ್ಸ್‌ನಲ್ಲಿ ಕ್ರಿಕೆಟ್ ಉತ್ತೇಜನಕ್ಕೆ ಭಾರತ ನೆರವಾಗಲಿದೆ. ಜನತೆಯ ಸಂಬಂಧವನ್ನು ಗಟ್ಟಿಗೊಳಿಸಲು ದೇಶದಲ್ಲಿ ಕ್ರೀಡೆಯ ಅಭಿವೃದ್ಧಿಯ ಗುರಿ ಇಟ್ಟುಕೊಂಡಿರುವ ಅಧ್ಯಕ್ಷ ಇಬ್ರಾಹಿಂ ಬಯಕೆ ಈಡೇರಿಸಲಿದೆ’’ ಎಂದು ಮೋದಿ ಹೇಳಿದ್ದಾರೆ.

 ‘‘ಕ್ರಿಕೆಟ್ ಮೂಲಕ ಸಂಪರ್ಕ! ನನ್ನ ಸ್ನೇಹಿತ, ಅಧ್ಯಕ್ಷ ಸೊಲಿಹ್ ಕಟ್ಟಾ ಕ್ರಿಕೆಟ್ ಅಭಿಮಾನಿ. ಹಾಗಾಗಿ ನಾನು ಅವರಿಗೆ ಟೀಮ್ ಇಂಡಿಯಾ ಹಸ್ತಾಕ್ಷರವಿರುವ ಕ್ರಿಕೆಟ್ ಬ್ಯಾಟ್‌ನ್ನು ಗಿಫ್ಟ್ ನೀಡಿದ್ದೇನೆ’’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಮಾಲ್ಡೀವ್ಸ್ ಕ್ರಿಕೆಟ್ ಆಟಗಾರರಿಗೆ ತರಬೇತಿ ನೀಡಲು ಭಾರತ ನೆರವಾಗಲಿದೆ. ಅವರನ್ನು ಅಗತ್ಯವಿರುವ ಮಟ್ಟಕ್ಕೆ ಬೆಳೆಸಲಾಗುವುದು ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News