ನಡಾಲ್‌ಗೆ ಐತಿಹಾಸಿಕ 12ನೇ ಫ್ರೆಂಚ್ ಓಪನ್ ಪ್ರಶಸ್ತಿ

Update: 2019-06-09 17:04 GMT

ಪ್ಯಾರಿಸ್, ಜೂ.9: ಸ್ಪೇನ್‌ನ ರಫೆಲ್ ನಡಾಲ್ 12ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿಗೆ ಮುತ್ತಿಕ್ಕುವ ಮೂಲಕ ಇತಿಹಾಸ ನಿರ್ಮಿಸಿದರು.

ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ 33ರ ಹರೆಯದ ಸ್ಪೇನ್ ಆಟಗಾರ ನಡಾಲ್ ಆಸ್ಟ್ರೀಯದ ಡೊಮಿನಿಕ್ ಥೀಮ್ ವಿರುದ್ಧ 6-3, 5-7, 6-1, 6-1 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ಈ ಮೂಲಕ ವೃತ್ತಿಜೀವನದ 18ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದರು.

 ನಡಾಲ್ ಒಂದೇ ಗ್ರಾನ್‌ಸ್ಲಾಮ್ ಟೂರ್ನಿಯನ್ನು 12 ಬಾರಿ ಜಯಿಸಿದ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾದರು. 20 ಗ್ರಾನ್‌ಸ್ಲಾಮ್ ಪ್ರಶಸ್ತಿಯೊಂದಿಗೆ ಸಾರ್ವಕಾಲಿಕ ದಾಖಲೆ ನಿರ್ಮಿಸಿರುವ ರೋಜರ್ ಫೆಡರರ್ ದಾಖಲೆ ಸರಿಗಟ್ಟಲು ಇನ್ನು 2 ಪ್ರಶಸ್ತಿಯ ಅಗತ್ಯವಿದೆ. ಸೆಮಿ ಫೈನಲ್‌ನಲ್ಲಿ ಥೀಮ್ ಎದುರು ಸೋತು ಹೊರ ನಡೆದ ನೊವಾಕ್ ಜೊಕೊವಿಕ್‌ಗಿಂತ 3 ಪ್ರಶಸ್ತಿಗಳಿಂದ ಮುಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News