ವಿಶೇಷ ಪೂಜೆ ನೆಪದಲ್ಲಿ 2.5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ನಕಲಿ ಜ್ಯೋತಿಷಿ

Update: 2019-06-09 17:03 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.9: ಶ್ರೀಮಂತರಾಗಲು ವಿಶೇಷ ಪೂಜೆ ಮಾಡಿ ಎಂದು ನಂಬಿಸಿ, ನಕಲಿ ಜ್ಯೋತಿಷಿಯೊಬ್ಬ, 2.5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.

ಆ ಸಂಬಂಧ ಚಿನ್ನಾಭರಣ ಕಳೆದುಕೊಂಡ ಅಪರ್ಣಾ ಎಂಬುವವರು ಬೈಯಪ್ಪನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಏನಿದು ಪ್ರಕರಣ?: ಬಿಳಿ ಬಣ್ಣದ ಕುರ್ತಾ, ಧೋತಿ, ಹಳದಿ ಬಣ್ಣದ ಸ್ಕಾರ್ ತೊಟ್ಟು ಮನೆಗೆ ಬಂದಿದ್ದ ವ್ಯಕ್ತಿ, ಜ್ಯೋತಿಷಿ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ಮನೆಗೆ ಬರಲು ಲಕ್ಷ್ಮೀ ಕಾಯುತ್ತಿದ್ದಾಳೆ. ಮನೆಯಲ್ಲಿರುವ ಚಿನ್ನಾಭರಣಗಳನ್ನು ಒಂದೆಡೆ ಇಟ್ಟು ವಿಶೇಷ ಪೂಜೆ ಮಾಡಿ ಆಕೆಯನ್ನು ಒಳಗೆ ಕರೆದುಕೊಳ್ಳಿ ಎಂದು ಹೇಳಿದ್ದ. ಅದನ್ನು ನಂಬಿದ್ದ ದೂರುದಾರರ ತಾಯಿ, ಡಬ್ಬಿಯೊಂದರಲ್ಲಿ ಚಿನ್ನಾಭರಣ ಹಾಗೂ 500 ರೂ.ನೋಟು ಇಟ್ಟು ಪೂಜೆ ಮಾಡಿಸಿದ್ದರು ಎನ್ನಲಾಗಿದೆ.

500 ರೂ. ನೋಟು ವಾಪಸ್ ಕೊಟ್ಟಿದ್ದ. ಅದನ್ನು ದೇವರ ಕೋಣೆಯಲ್ಲಿಡಿ ಎಂದು ಹೇಳಿ ಚಿನ್ನಾಭರಣ ಸಮೇತ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News