ವ್ಹೀಲಿಂಗ್ ನಡೆಸುತ್ತಿದ್ದ 6 ಬೈಕ್‌ಗಳ ಜಪ್ತಿ

Update: 2019-06-09 17:09 GMT

ಬೆಂಗಳೂರು, ಜೂ.9: ಕಾನೂನು ಬಾಹಿರ ವ್ಹೀಲಿಂಗ್ ಮಾಡುವರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಉತ್ತರ ವಿಭಾಗದ ಸಂಚಾರ ಪೊಲೀಸರು, ವ್ಹೀಲಿಂಗ್ ನಡೆಸುತ್ತಿದ್ದ 6 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ 3, ಯಲಹಂಕ 2, ಚಿಕ್ಕಜಾಲ 1 ಸೇರಿ 6 ವಾಹನ ವಶಕ್ಕೆ ಪಡೆಯಲಾಗಿದ್ದು. 8 ಯುವಕರನ್ನು ಠಾಣೆಗೆ ತಂದು ವಿಚಾರಣೆ ನಡೆಸಲಾಗಿದೆ.

ಯಲಹಂಕ, ಚಿಕ್ಕಜಾಲ, ಆರ್‌ಟಿ ನಗರ, ದೇವನಹಳ್ಳಿ ಸೇರಿ ಉತ್ತರ ವಿಭಾಗದ ಎಲ್ಲ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವ್ಹೀಲಿಂಗ್ ನಡೆಸುವರನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ತೀವ್ರ ಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News