ಕಲೆ, ಸಂಸ್ಕೃತಿಯೊಳಗೆ ಮಾನವ ಶಕ್ತಿಯ ಮೂಲ ಅಡಗಿದೆ: ನಿರ್ದೇಶಕ ಓಂ.ಸಾಯಿ ಪ್ರಕಾಶ್

Update: 2019-06-09 17:29 GMT

ಬೆಂಗಳೂರು, ಜೂ.9: ಕಲೆ, ಸಂಸ್ಕೃತಿಯೊಳಗೆ ಮಾನವ ಶಕ್ತಿಯ ಮೂಲ ಅಡಗಿದ್ದು, ಕಲಾವಿದರನ್ನು ಉಳಿಸಿಕೊಳ್ಳುವ ಕಾಯಕ ಮುಂದುವರೆಯಬೇಕು ಎಂದು ಸಿನಿಮಾ ಹಿರಿಯ ನಿರ್ದೇಶಕ ಓಂ.ಸಾಯಿ ಪ್ರಕಾಶ್ ನುಡಿದರು.

ರವಿವಾರ ನಗರದ ಸ್ವಾತಂತ್ರ್ಯ ಉದ್ಯಾನ ಬಯಲು ಸಭಾಂಗಣದಲ್ಲಿ ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಆಯೋಜಿಸಿದ್ದ, ಹಿರಿಯ ಪೋಷಕ ಕಲಾವಿದರಿಗೆ ಸನ್ಮಾನ ಸಮಾರಮಭದಲ್ಲಿ ಅವರು ಮಾತನಾಡಿದರು.

ನಾಟಕ, ಸಿನಿಮಾಗಳು ಕನ್ನಡ ಭಾಷೆಗೆ ಸಂದೇಶಗಳನ್ನು ನೀಡುತ್ತವೆ. ಕಲೆ, ಸಂಸ್ಕೃತಿ ದೇಶದ ಭವ್ಯಪರಂಪರೆ ಉಳಿಸಿ ಬೆಳೆಸುತ್ತವೆ. ಅಷ್ಟೇ ಅಲ್ಲದೆ, ಕೆಲವೊಂದು ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸತ್ಯ ನಿಷ್ಠೆಯಿಂದ ನಡೆಯಲು ಸಹಕಾರಿಯಾಗುತ್ತದೆ ಎಂದರು.

ಮಾನವನ ಜೀವನವೇ ಒಂದು ಸಿನಿಮಾ, ಆ ಸಿನಿಮಾದಲ್ಲಿ ನಾವೆಲ್ಲರೂ ಪಾತ್ರದಾರಿಗಳು. ಹೊಸ ಮಾಧ್ಯಮದಿಂದ ರಂಗ ಕಲೆಯ ವಿನಾಶದ ಅಂಚಿಗೆ ಸಾಗುತ್ತಿರುವ ಸಮಯದಲ್ಲಿ ಸಿನಿಮಾ ಮತ್ತು ಕಲಾವಿದರನ್ನು ಉಳಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಪೋಷಕ ಕಲಾವಿದರಾದ ಡಿಂಗ್ರಿನಾಗರಾಜ್, ರೇಖಾದಾಸ್, ಆಡುಗೋಡಿ ಶ್ರೀನಿವಾಸ್, ಕಮಲಾ, ಗೌರಿ ಶ್ರೀ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News